fbpx

ಪೊಲೀಸರ ಹಂತಕ ವಿಕಾಸ್ ದುಬೆ ಆಪ್ತ ಎನ್ಕೌಂಟರ್‌ನಲ್ಲಿ ಹತ (ವಿಡಿಯೋ)

ಉತ್ತರಪ್ರದೇಶದಲ್ಲಿ ಎಂಟು ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯ ಆಪ್ತನನ್ನು ಪೊಲೀಸರು ಇಂದು ಮುಂಜಾನೆ ಎನ್ಕೌಂಟರ್ ಮಾಡಿದ್ದಾರೆ. ಹಮೀರ್ಪುರ್ ಜಿಲ್ಲೆಯಲ್ಲಿ ಅಡಗಿಕೊಂಡಿದ್ದ ಅಮರ್ ದುಬೆಯನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ.

ಹತ ಅಮರ್ ದುಬೆ ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯ ಪರಮಾಪ್ತನಾಗಿದ್ದು ಪೊಲೀಸರ ಹತ್ಯೆಯಲ್ಲಿ ಈತನೂ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಈತನ ಹೆಸರೂ ಕೂಡ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದ್ದು, ಪೊಲೀಸರಿಗೆ ಬೇಕಾಗಿದ್ದನು.


Continue Reading

ಈತನ ಜಾಡು ಹಿಡಿದು ಹೊರಟ ಪೋಲೀಸರಿಗೆ ಈತ ಹಮೀರ್ಪುರ ಜಿಲ್ಲೆಯಲ್ಲಿ ಇರುವ ಮಾಹಿತಿ ಸಿಕ್ಕಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ವಿಶೇಷ ಕಾರ್ಯಪಡೆ ಪೊಲೀಸರು ಅಮರ್ ದುಬೆಯನ್ನು ಎನ್ಕೌಂಟರ್ ಮೂಲಕ ಹೊಡೆದುರುಳಿಸಿದೆ. ಇದಷ್ಟೇ ಅಲ್ಲದೆ, ಪೊಲೀಸರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು ಇವರು ಹರ್ಯಾಣದ ಫರಿದಾಬಾದ್ ನಲ್ಲಿರುವ ಹೋಟೆಲಿನಲ್ಲಿ ಅವಿತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:  'ಲಡಾಕ್ ಗಡಿಗೆ ಹೋಗಲ್ಲ' ಎಂದು ಗೋಳಾಡುತ್ತಿರುವ ಚೀನೀ ಯೋಧರು? ವೈರಲ್ ವಿಡಿಯೋ ನೋಡಿ

ಬಂಧಿತರಿಂದ ಆಯುಧ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣ ಪ್ರಮುಖ ಆರೋಪಿ, ಪಾತಕಿ ವಿಕಾಸ್ ದುಬೆಗಾಗಿ ಪೊಲೀಸರ ಹುಡುಕಾಟ ಮುಂದುವರೆದಿದ್ದು ಈತ ದೆಹಲಿಯಲ್ಲೇ ಅವಿತಿದ್ದಾನೆ ಎಂದು ತಿಳಿದುಬಂದಿದೆ.

Watch Video

Trending Short Videos

close

This will close in 26 seconds

error: Content is protected !!