fbpx

VIDEO| ಕೊರೋನಾ ವಿರುದ್ಧದ ಹೋರಾಟದಲ್ಲಿ ಈ ಯುವಕರು ಮಾಡಿದ್ದೇನು ನೋಡಿ

ದೇಶದಾದ್ಯಂತ ಮಾರಕ ರೋಗವಾಗಿ ನಮ್ಮನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗವಾದ ಕೊರೊನಾ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿರುವುದು ಗಂಟೆಗೊಮ್ಮೆ ಸಾಬೂನು ಅಥವಾ ಸ್ಯಾನಿಟೈಜರ್‌ನಿಂದ ಕೈ ತೊಳಿಯಬೇಕು ಎಂದು ವೈದ್ಯರು ಶಿಫಾರಸ್ಸು ಮಾಡಿದ್ದಾರೆ. ಹೌದು ಸ್ಯಾನಿಟೈಜರ್‌ನಿಂದ ಕೈ ತೊಳೆಯುವುದರಿಂದ ಕೈಗೆ ಅಂಟಿದ ವೈರಸ್ ತೊಡೆದು ಹಾಕಬಹುದಾಗಿದೆ.

ಸ್ಯಾನಿಟೈಜರ್‌ನಿಂದ ಕೈ ತೋಳೆಯಬೇಕು ಅಂದರೆ ನಾವು ಇಷ್ಟು ದಿನ ಮೆಡಿಕಲ್‌ಗಳಿಗೆ ಹೋಗಿ ಖರಿದಿ ಮಾಡಿ ತರಬೇಕಾಗುತ್ತಿತ್ತು ಆದರೆ ಇನ್ಮುಂದೆ ಹಾಗೇ ಮಾಡಬೇಡಿ ಮನೆಯಲ್ಲಿಯೇ ಕುಳಿತು ನೀವೇ ಸ್ಯಾನಿಟೈಜರ್‌‌ ಅನ್ನು ತಯಾರಿಸಿ. ಇದನ್ನು ತಯಾರಿಸುವ ವಿಧಾನ ಅತೀ ಸುಲಭ ಹಾಗೂ ಕಡಿಮೆ ಸಮಯ ಬೇಕಾಗುವುದು ಹಾಗಾದರೆ ಮತ್ಯಾಕೆ ಮೆಡಿಕಲ್‌ಗಳಿಗೆ ಹೋಗಿ ಖರೀದಿ ಮಾಡ್ತಿರಾ ಇಂದೆ ನಿಮ್ಮ ಮನೆಯಲ್ಲಿಯೇ ಸ್ಯಾನಿಟೈಜರ್‌ ತಯಾರಿಸಿ.

ಮನೆಯ ಇಲ್ಲಿಯೇ ನೀವು ಸ್ಯಾನಿಟೈಜರ್ ತಯಾರಿಸುವ ವಿಧಾನವನ್ನು ನಮ್ಮದೇ ಕರ್ನಾಟಕ ರಾಜ್ಯದ ಕೋಲಾರದ ನವ ಪೀಳಿಗೆ ಕಂಡು ಹಿಡಿದಿದ್ದಾರೆ. ಈ ಯುವ ತಂಡ ಕಂಡು ಹಿಡಿದ ಈ ವಿಧಾನ ನಿಜಕ್ಕೂ ಎಲ್ಲರಿಗೂ ಸಹಾಯಕವಾಗಲಿದೆ. ಪ್ರತಿಯೊಬ್ಬರು ಈ ವಿಧಾನವನ್ನು ಅನುಸರಿಸುವ ಮೂಲಕ ನಿಮ್ಮ ನಿಮ್ಮ ಮನೆಯಲ್ಲಿಯೇ ಸ್ಯಾನಿಟೈಜರ್‌ ತಯಾಾರಸಿ ಅದರಿಂದ ಕೈ ತೊಳೆಯಿರಿ. ಹಾಗೆಯೇ ಇದನ್ನು ಹೇಳಿಕೊಟ್ಟ ಆ ಯುವ ತಂಡಕ್ಕೆ ಧನ್ಯವಾದಗಳು ಅರ್ಪಿಸಿ.

Trending Short Videos

error: Content is protected !!