fbpx

ಕರೋನಾ ಲಸಿಕೆ ಸಿದ್ದ! ಇಟಲಿ ಸರ್ಕಾರ ಹೇಳಿದ್ದೇನು ನೋಡಿ

ಕರೋನಾ ಸೋಂಕು ಇಡೀ ಪ್ರಪಂಚವನ್ನೇ ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದೆ. ಈಗಾಗಲೇ ಮೂರು ಲಕ್ಷ ಜನರನ್ನ ಬ’ಲಿತೆಗೆದುಕೊಂಡಿರುವ ಸೋಂಕಿಗೆ ಔಷಧ ಶೋಧಿಸಲು ವಿಶ್ವದ 100ಕ್ಕೂ ಅಧಿಕ ಕಡೆಗಳಲ್ಲಿ ವಿಜ್ಞಾನಿಗಳು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ.

ಈ ಮಧ್ಯೆ ಇದೀಗ ಇಟಲಿ ದೇಶದಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಕರೋನಾ ಸೋಂಕಿಗೆ ಔಷಧಿ ಸಿದ್ದಪಡಿಸಿರೋದಾಗಿ ರೋಮ್‌ನಲ್ಲಿರುವ ‘ಲಾಜ್ಜಾರೋ ಸ್ಪಾಲಾಂಜಾನಿ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆ’ ಘೋಷಿಸಿದೆ.

ಈಗಾಗಲೇ ಈ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗ ಮಾಡಿದ್ದು, ಲಸಿಕೆ ಇಲಿಗಳ ದೇಹದಲ್ಲಿ ಕರೋನಾ ವಿರುದ್ಧ ಹೋರಾಡಬಲ್ಲ ಆ್ಯಂಟಿಬಾಡಿಯನ್ನು ಸೃಷ್ಟಿಸಿದೆ. ಈ ಲಸಿಕೆ ಕರೋನಾ ಸೋಂಕಿತ ಮಾನವರ ಜೀವಕೋಶಗಳಲ್ಲೂ ಕೆಲಸ ಮಾಡಿದೆ. ಕೊರೋನಾ ವೈರಾಣುವನ್ನು ನಿಷ್ಕ್ರಿಯ ಮಾಡಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

error: Content is protected !!