fbpx

ಬೆಳ್ಳಂಬೆಳಗ್ಗೆ ಸೇನೆಯಿಂದ ಭರ್ಜರಿ ಭೇಟೆ

ಜಮ್ಮುಕಾಶ್ಮೀರದ ಅವಂತಿಪೊರಾದಲ್ಲಿ ಭಾರತೀಯ ಸೇನೆಯು ಉ’ಗ್ರರ ವಿರುದ್ಧದ ಕಾ’ರ್ಯಾಚರಣೆಯಲ್ಲಿ ಓರ್ವ ಉ’ಗ್ರನನ್ನು ಹೊ’ಡೆದುರುಳಿಸಿದೆ. ಉ’ಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಅವಂತಿಪೊರಾದ ಶರ್ಷಾಲಿ ಖ್ರೂ ಎಂಬ ಪ್ರದೇಶದಲ್ಲಿ ಸೇ’ನಾಪಡೆಗಳು ಕಾರ್ಯಾಚರಣೆ ನಡೆಸಿದೆ.

ಈ ವೇಳೆಯಲ್ಲಿ ಉ’ಗ್ರರು ಏಕಾಏಕಿ ಸೇನಾಪಡೆಗಳ ಮೇಲೆ ಗುಂ’ಡಿನ ದಾ’ಳಿ ನಡೆಸಲು ಆರಂಭಿಸಿದ್ದು, ಗುಂಡಿನ ಚಕಮಕಿಯಲ್ಲಿ ಸೇನೆ ಓರ್ವ ಉ’ಗ್ರನನ್ನು ಹೊ’ಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಇನ್ನಷ್ಟು ಉ’ಗ್ರರು ಅಡಗಿರುವ ಬಗ್ಗೆ ಮಾಹಿತಿ ಇದ್ದು, ಕಾ’ರ್ಯಾಚರಣೆ ಮುಂದುವರೆದಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ನಿನ್ನೆಯಷ್ಟೇ ಭಾರತೀಯ ಯೋಧರು ಓರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದು, ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಇಂದು ಬೆಳಗ್ಗೆಯೇ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ಉಗ್ರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಏಳು ಯೋಧರು ಹುತಾತ್ಮರಾಗಿದ್ದಾರೆ.

error: Content is protected !!