fbpx

Please assign a menu to the primary menu location under menu

“ನಮ್ಮ ಅಂಗಡಿಗಳ ಮೇಲಿನ ಭಗವಾ ಧ್ವಜ ತೆಗೀತೀರ? ಕೇಸ್ ಹಾಕ್ತೀರ?”

ಜಾರ್ಖಂಡ್‌ನಲ್ಲಿ ‘ಹಿಂದೂ ಫಲ್ ದುಕಾನ್’ ಎಂಬ ಬ್ಯಾನರ್ ಹಾಕುವುದು ಅಪರಾಧ. ಕೆಲ ದಿನಗಳ ಹಿಂದೆ, ಜಮಶೆಡ್‌ಪುರ ಪೊಲೀಸರು ಹಣ್ಣು ಅಂಗಡಿಯವರ ವಿರುದ್ಧ ಇಂತಹ ಬ್ಯಾನರ್ ಹಾಕಿದ್ದಕ್ಕಾಗಿ ಪ್ರಕರಣಗಳನ್ನು ದಾಖಲಿಸಿದ್ದರು. ಇದರಿಂದ ಸಾಮಾಜಿಕ ಸಾಮರಸ್ಯಕ್ಕೆ ಭಂಗ ತರುವ ಅಪಾಯವಿದೆ ಎಂದು ಪೊಲೀಸರು ಹೇಳುತ್ತಾರೆ.

ಪೊಲೀಸರ ಈ ಕ್ರಮದ ನಂತರ ಇಡೀ ರಾಜ್ಯದಲ್ಲಿ ಹಿಂದುಗಳ ಆಕ್ರೋಶದ ಕಟ್ಟೆ ಒಡೆದಿದೆ, ಅದು ಈಗ ಮುಕ್ತವಾಗಿ ಹೊರಬರುತ್ತಿದೆ. ರಾಜ್ಯದ ಹೇಮಂತ್ ಸೋರೆನ್ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಜನರು ಅಂಗಡಿಗಳು ಮತ್ತು ತಳ್ಳುವ ಗಾಡಿಗಳ ಮೇಲೆ ಕೇಸರಿ ಧ್ವಜ ಮತ್ತು ಬ್ಯಾನರ್‌ಗಳನ್ನು ಹಾಕುತ್ತಿದ್ದಾರೆ.

ಇದನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಜನರು ತಮ್ಮ ಅಸಮಾಧಾನವನ್ನು ಹೇಗೆ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಸಹ ನೀವು ನೋಡಬಹುದು.

error: Content is protected !!