fbpx

Please assign a menu to the primary menu location under menu

ಪ್ರಧಾನಮಂತ್ರಿಯ ಸಾ’ವಿನ ಸುದ್ದಿ ಕೊಡಲು ಪ್ಲ್ಯಾನ್ ಮಾಡಿದ್ದ ವೈದ್ಯರು, ಆದರೆ ಅಚಾನಕ್ಕಾಗಿ…

ಕರೋನಾ ವೈರಸ್ ಪ್ರಪಂಚದಾದ್ಯಂತ ಕೋಲಾಹಲವನ್ನೇ ಸೃಷ್ಟಿಸಿಬಿಟ್ಟಿದೆ, ಈ ಕಾರಣದಿಂದಾಗಿ ಅನೇಕ ದೊಡ್ಡ ಸೆಲೆಬ್ರಿಟಿಗಳು ಕೂಡ ಕೊರೋನಾ ಸೋಂಕಿತರಾಗಿಬಿಟ್ಟಿದ್ದಾರೆ. ಕರೋನಾ ವೈರಸ್ ರೋಗಿಯಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಂದರ್ಶನವೊಂದರಲ್ಲಿ ಸ್ಪೋಟಕ ಮಾಹಿತಿಯೊಂದನ್ನ ತಿಳಿಸಿದ್ದು ವೈದ್ಯರು ತಮ್ಮ ಸಾವಿನ ಬಗ್ಗೆ ಇನ್ನೇನು ಘೋಷಿಸಲು ಎಲ್ಲ ಸಿದ್ಧತೆಗಳನ್ನು ನಡೆಸಿದ್ದರು ಎಂದು ತಿಳಿಸಿದ್ದಾರೆ. ಘೋಷಣೆಗೆ ಸಿದ್ಧಪಡಿಸಿದ್ದಾರೆ ಎಂದು ನಿಮಗೆ ತಿಳಿಸೋಣ.

‘ದಿ ಸನ್’ ಜೊತೆ ಬೋರಿಸ್ ಜಾನ್ಸನ್ ಮಾತನಾಡುವಾಗ, ತಮ್ಮನ್ನ ಜೀವಂತವಾಗಿಡಲು ಹಲವಾರು ಲೀಟರ್ ಆಕ್ಸಿಜನ್ ನೀಡಲಾಯಿತು ಎಂದು ಹೇಳಿದರು. 55 ವರ್ಷದ ಬೋರಿಸ್ ಜಾನ್ಸನ್ ಮುಂದೆ ಮಾತನಾಡುತ್ರ – “ನಿಜಕ್ಕೂ‌ಅದೊಂದು ಕೆಟ್ಟ ಸಮಯವಾಗಿತ್ತು ಅನ್ನೋದನ್ನ ನಾನು ನಿರಾಕರಿಸುವುದಿಲ್ಲ. ಅವರು ‘ಸ್ಟಾಲಿನ್ ಸಾವು’ ಅದನ್ನ ಹೇಗೆ ಘೋಷಿಸಲಾಗಿತ್ತೋ ಅದೇ ಮಾದರಿಯಲ್ಲಿ ನನ್ನ ಸಾವನ್ನ ಘೋಷಿಸಲು ಅವರು ಯೋಜಿಸಿದ್ದರು. ನನ್ನ ಪರಿಸ್ಥಿತಿ ಉತ್ತಮವಾಗಿರಲಿಲ್ಲ, ಏನೋ ಒಂದು ಆಕಸ್ಮಿತ ಆಘಾತಕಾರಿ ಸುದ್ದಿಯನ್ನ ಹೊರಡಿಸೋಕೆ ಪ್ಲ್ಯಾನ್ ರೆಡಿ ಇತ್ತು” ಎಂದಿದ್ದಾರೆ.

ಈಗ ಕರೋನಾ ವೈರಸ್‌ನಿಂದ ಗುಣಮುಖರಾದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಾತನಾಡುತ್ತ ಏನಾದರೂ ತಪ್ಪಾದಲ್ಲಿ ಏನು ಮಾಡೋಕಾಗತ್ತೆ, ನನ್ನ ಆರೋಗ್ಯದ ಬಗ್ಗೆ ಅಂದರೆ ನನ್ನ ಸಾವಿನ ಸುದ್ದಿಯ ಬಗ್ಗೆ ದೇಶಕ್ಕೆ ತಿಳಿಸಲು ವೈದ್ಯರು ಸಿದ್ಧತೆ ನಡೆಸಿದ್ದರು ಎಂದು ಹೇಳಿದರು. ಬೋರಿಸ್ ಜಾನ್ಸನ್ ಸ್ಥಿತಿ ಕೊರೋನಾದಿಂದ ಗಂಭೀರವಾಗಿದ್ದರಿಂದ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದ ಆ ಸಮಯದ ಬಗ್ಗೆ ಮಾತನಾಡಿದ ಜಾನ್ಸನ್, ಮಾನಿಟರ್‌ನಲ್ಲಿ ಕಾಣಿಸುತ್ತಿದ್ದ ಇಂಡಿಕೇಟರ್ ಗಳು ನಿರಂತರವಾಗಿ ತಪ್ಪಾದ ದಿಕ್ಕಿನಲ್ಲಿ ಸಾಗುತ್ತಿದ್ದವು ಎಂದು ಹೇಳಿದರು.

ಅದನ್ನ ನೋಡಿ ಈ ಕೊರೋನಾ ವೈರಸ್‌ಗೆ ಯಾವುದೇ ಚಿಕಿತ್ಸೆಯ ಇಲ್ಲ ಎಂಬುದು ಅವರಿಗೆ ಅರ್ಥವಾಗಿತ್ತು. ಕಳೆದ ತಿಂಗಳು ಬೋರಿಸ್ ಜಾನ್ಸನ್ ರವರ ಚಿಕಿತ್ಸೆ ಲಂಡನ್ನಿನ ಸೇಂಟ್ ಥಾಮಸ್ ಹಾಸ್ಪಿಟಲ್ ನಲ್ಲಿ ನಡೆದಿತ್ತು.‌ ಚಿಕಿತ್ಸೆಯ ಸಂದರ್ಭದಲ್ಲ ಬೋರಿಸ್ ಜಾನ್ಸನ್ ಸತತವಾಗಿ “ನಾನು ಈ ಸ್ಥಿತಿಯಿಂದ ಹೇಗೆ ಹೊರಬರಬಹುದು?” ಎಂದು ಯೋಚಿಸುತ್ತಿದ್ದರು. ಅವರಿಗೆ ಆ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು ಹಾಗು ಕೆಲವೇ ದಿನಗಳಲ್ಲಿ ನನ್ನ ಆರೋಗ್ಯ ಸ್ಥಿತಿ ಅದ್ ಹೇಗೆ ಈ ಮಟ್ಟಿಗೆ ಕೆಟ್ಟು ಹೋಯಿತು ಅನ್ನೋದರ ಬಗ್ಗೆ ಚಿಂತೆ ಮಾಡುತ್ತಿದ್ದೆ ‌. ನನಗೆ ನೆನಪಿದೆ ನಾನು ಆಗ ತುಂಬಾ ಫ್ರಸ್ಟ್ರೇಟೆಡ್ ಆಗಿದ್ದೆ. ನನಗೆ ನಾನು ಯಾಕೆ ಗುಣಮುಖನಾಗುತ್ತಿಲ್ಲ ಅನ್ನೋದೇ ಅರ್ಥವಾಗುತ್ತಿರಲಿಲ್ಲ ಎಂದಿದ್ದಾರೆ.

error: Content is protected !!