ಕ’ರೋನಾ ತಡೆಗಟ್ಟಲು ಕ’ರೋನಾ ವಾರಿಯರ್ಸ್ ಗಳು ಹಗಲು ರಾತ್ರಿ ಎನ್ನದೆ ಕಷ್ಟ ಪಡುತ್ತಿದ್ದರೂ ಕೆಲ ಪುಂಡರಿಗೆ ಅದು ಅರ್ಥ ಆಗುತ್ತಿಲ್ಲ. ವೈದ್ಯರು, ಆಶಾಕಾರ್ಯಕರ್ತೆಯರು, ಪೋಲೀಸರ ಮೇಲೆ ಧಾ’ಳಿ ಮಾಡೋದು, ಬೆದರಿಕೆ ಹಾಕೋ ಕೆಲಸಗಳನ್ನು ಮಾಡುತ್ತಿದ್ದಾರೆ.
ದೇಶದಲ್ಲಿ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ ಇನ್ನೂ ಕೆಲ ಜನರಿಗೆ ಬುದ್ದಿ ಬಂದಿಲ್ಲ. ಲಾಕ್-ಡೌನ್ ಉಲ್ಲಂಘಿಸಿ ವಾಹನಗಳಲ್ಲಿ ಅನಗತ್ಯವಾಗಿ ತಿರುಗುತ್ತಿದ್ದಾರೆ. ಇದೇ ರೀತಿ ಅನಗತ್ಯ ತಿರುಗಾಡುತ್ತಿದ್ದ ಯುವಕನೋರ್ವನನ್ನು ಪೋಲೀಸ್ ಚೆಕ್ ಪೋಸ್ಟ್ ನಲ್ಲಿ ತಡೆದ್ರೆ, ಆತ ತಡೆದ ಪೋಲೀಸ್ ಅಧಿಕಾರಿಗೇ ಕಾರು ಗುದ್ದಿ ಬಾನೆಟ್ ಮೇಲೆ ಕೂರಿಸಿ ಬಹಳ ದೂರದವರೆಗೆ ಎಳ್ಕೊಂಡು ಹೋಗಿದ್ದಾನೆ.
ಘಟನೆ ನಡೆದಿರೋದು ಪಂಜಾಬ್ ರಾಜ್ಯದ ಜಲಂದರ್ ನಲ್ಲಿ. ಪೊಲೀಸರು ಕಾರು ನಿಲ್ಲಿಸುವಂತೆ ಆಜ್ಞೆ ಮಾಡಿದ್ರೆ ಯುವಕ ಪೋಲೀಸಪ್ಪನಿಗೆ ಗುದ್ದಿಕೊಂಡೆ ಕಾರು ಓಡಿಸಿದ್ದಾನೆ. ತಕ್ಷಣ ಪೋಲೀಸರು ಕಾರ್ಯಪ್ರವೃತ್ತರಾಗಿ ಆತನ ಕಾರು ನಿಲ್ಲಿಸಿದ್ದಾರೆ. ಪುಂಡಾಟ ತೋರಿದ ಯುವಕನಿಗೆ ಅಲ್ಲೇ ನಾಲ್ಕು ಬಿಗಿದು, ಗಾಯಗೊಂಡ ಪೋಲೀಸ್ ಅಧಿಕಾರಿಯನ್ನು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವೀಡಿಯೋ,