ಕ’ರೋನಾ ಸೋಂಕಿನ ಕಾರಣದಿಂದಾಗಿ ಜನರು ಗುಂಪು ಸೇರಬಾರದೆಂಬ ಉದ್ದೇಶದಿಂದ ದೇಶದಾದ್ಯಂತ ದೇ’ವಸ್ಥಾನ ,ಚ’ರ್ಚ್, ಮ’ಸೀದಿ ಹಾಗೂ ಇತರ ಯಾವುದೇ ಪ್ರಾರ್ಥನಾ ಮಂದಿರಗಳನ್ನು ಮುಚ್ಚಬೇಕು ಎಂಬ ಆದೇಶ ಜಾರಿಯಲ್ಲಿದೆ. ಆದರೂ ಹಲವು ಕಡೆಗಳಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಗುತ್ತಿದೆ. ಈಗಾಗಲೇ ಈ ರೀತಿ ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇಷ್ಟೆಲ್ಲದರ ಮಧ್ಯೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮ’ಸೀದಿಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಾಮೂಹಿಕವಾಗಿ ನ’ಮಾಜ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಸಾಮೂಹಿಕ ನ’ಮಾಜ್ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ತಹಶೀಲ್ದಾರ್ ಶೋಭಿತ ಅವರು ನೇರವಾಗಿ ಮಸೀದಿಗೆ ಪ್ರವೇಶ ಮಾಡಿ ನ’ಮಾಜ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.
ಮ’ಸೀದಿಯಲ್ಲಿ ಗುಂಪುಗೂಡಿ ನ’ಮಾಜ್ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡ ಅವರು, “ಲಾಕ್-ಡೌನ್ ಇದ್ರೂ ನಿಮಗೆ ಮ’ಸೀದಿಯಲ್ಲಿ ಒಟ್ಟಾಗಿ ಸೇರಿ ನ’ಮಾಜ್ ಮಾಡಲು ಯಾರು ಹೇಳಿದ್ದು, ಈ ರೀತಿ ಸಾಮೂಹಿಕವಾಗಿ ಸೇರಬಾರದು ಎಂದು ನಿಮಗೆ ಅರಿವಿಲ್ವಾ? ಇವರೆಲ್ಲರನ್ನೂ ಇಲ್ಲಿಯೇ ಕೂಡಿಹಾಕಿ. ಯಾರನ್ನೂ ಹೊರಗೆ ಬಿಡಬೇಡಿ ” ಎಂದಿದ್ದಾರೆ.
ಇದೀಗ ಮ’ಸೀದಿಗೆ ನುಗ್ಗಿ ನ’ಮಾಜಿಗಳನ್ನು ಜಾಡಿಸಿದ ಕೋಲಾರ ಮಹಿಳಾ ತಹಶೀಲ್ದಾರ್ ಶೋಭಿತ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ಮ’ಸೀದಿಯೊಳಗೆ ಕಾಲಿರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೀಡಿಯೋ ನೋಡಿ,