fbpx

Please assign a menu to the primary menu location under menu

ಏಪ್ರಿಲ್20 ರಂದು ಕುಡುಕರಿಗೆ ಸಿಹಿಸುದ್ದಿ ಕೊಡಲಿದೆಯೇ ಸರ್ಕಾರ?

ದೇಶದಲ್ಲಿ ಕೊರೋನಾ ಲಾಕ್-ಡೌನ್ ಜಾರಿಯಾದಾಗಿನಿಂದ ಮದ್ಯದಂಗಡಿಗಳಿಗೆ ಬೀಗ ಹಾಕಲಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರಿಗಿಂತ ಕುಡಿಯೋಕೆ ಮದ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡವರೆ ಹೆಚ್ಚು. ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಡುವ ಉದ್ಯಮಗಳಲ್ಲಿ ಮದ್ಯ ಮಾರಾಟವೂ ಒಂದು.

ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಕರ್ನಾಟಕಕ್ಕೆ ಇದೀಗ ಮದ್ಯ ಮಾರಾಟ ನಿಶೇಧವಾಗಿರೋದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೆಲ ಮಾಹಿತಿ ಪ್ರಕಾರ ಇದೇ ಬರುವ ಮಂಗಳವಾರ ಮದ್ಯಪ್ರಿಯರಿಗೆ ಸಿಹಿಸುದ್ದಿ ಸಿಗಲಿದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್20 ರಂದು ರಾಜ್ಯಸರ್ಕಾರ ಸಂಪುಟ ಸಭೆ ಕರೆದಿದ್ದು, ಲಾಕ್-ಡೌನ್ ಸಡಿಲಿಕೆ, ಸೋಂಕು ನಿಯಂತ್ರಣದ ಬಗ್ಗೆ ಚರ್ಚೆ ನಡೆಸಲಿದೆ ಎನ್ನಲಾಗುತ್ತಿದೆ.

ಬೆಳಗ್ಗೆ 11ಗಂಟೆಗೆ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಆರ್ಥಿಕ ಸಂಕಷ್ಟದ ಬಗ್ಗೆ ಅಧಿಕಾರಿಗಳು ಸಿಎಂ ಗಮನಕ್ಕೆ ತಂದಿದ್ದು, ಮದ್ಯ ಮಾರಾಟ ಆರಂಭವಾಗಲಿದೆಯಾ ಎಂದು ಸಂಪುಟದಲ್ಲಿ ನಿರ್ಧಾರವಾಗಲಿದೆ.

ಮದ್ಯ ಮಾರಾಟಕ್ಕೆ ಹೆಚ್ಚಿನ ಒತ್ತಡ ಇರುವ ಕಾರಣ ಮಾರಾಟಕ್ಕೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆಯೂ ಚರ್ಚೆ ನಡೆಯಲಿದೆ. ಒಂದು ವೇಳೆ ಮದ್ಯಮಾರಾಟ ಪುನರಾರಂಭವಾದರೆ ಕುಡುಕರಿಗೆ ಇದಕ್ಕಿಂತ ಖುಷಿಯ ವಿಚಾರ ಬೇರೊಂದು ಇರಲು ಸಾಧ್ಯವಿಲ್ಲ. ಕೊರೋನಾ ನಿಯಂತ್ರಣವಾಗದೆ ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕೆ ಬೇಡವೆ, ನಿಮ್ಮ ಅಭಿಪ್ರಾಯ ತಿಳಿಸಿ.

Leave a Reply

This site uses Akismet to reduce spam. Learn how your comment data is processed.

error: Content is protected !!