fbpx

Please assign a menu to the primary menu location under menu

ಲಾಕ್-ಡೌನ್ ತೆರವುಗೊಳಿಸುವಂತೆ ಗನ್ ಪಿಸ್ತೂಲ್ ಹಿಡಿದು ರಸ್ತೆಗಿಳಿದ ಜನ (ವೀಡಿಯೋ)

ಪ್ರಪಂಚದಾದ್ಯಂತ ಕೊರೋನಾ ಸೊಂಕು ತಾಂಡವವಾಡುತ್ತಿರುವ ಕಾರಣಕ್ಕೆ ಹಲವು ದೇಶಗಳು ಲಾಕ್ ಡೌನ್ ಮೊರೆ ಹೋಗಿದೆ. ಲಾಕ್-ಡೌನ್ ಮಾಡಿದರೆ ಜನರ ನಡುವೆ ಸಂಪರ್ಕ ಕಡಿಮೆಯಾಗೋದರಿಂದ ಸೋಂಕು ಹರಡೋದನ್ನ ತಡೆಯಬಹುದು, ಇದೇ ಕಾರಣಕ್ಕೆ ಅಮೇರಿಕಾದ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಲಾಕ್-ಡೌನ್ ಜಾರಿಯಲ್ಲಿದೆ.

ಅಮೇರಿಕಾದಲ್ಲಿ 7ಲಕ್ಷಕ್ಕೂ ಹೆಚ್ಚು ಕೊರೋನಾ ಸೋಂಕಿತರಿದ್ದು, ಇದುವರೆಗೆ 35ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿಗೆ ಪ್ರಾಣ ತೆತ್ತಿದ್ದಾರೆ. ಆದರೆ ಇಲ್ಲಿನ ಜನಕ್ಕೆ ಇನ್ನೂ ಬುದ್ದಿಬಂದಿಲ್ಲ.

ಅಮೇರಿಕಾದ ಮಿಚಿಗನ್ ನಲ್ಲಿ ವಿಧಿಸಲಾಗಿರುವ ಲಾಕ್-ಡೌನ್ ತೆರವುಗೊಳಿಸುವಂತೆ ಜನರು ಗನ್ ಪಿಸ್ತೂಲ್ ಹಿಡಿದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ತಮಗೆ ಸಂವಿಧಾನದಲ್ಲಿ ನೀಡಿರುವ ಸ್ವಾತಂತ್ರ್ಯಗಳನ್ನು ಮರಳಿ ನೀಡಿ, ನಮಗೆ ಓಡಾಡಲು ಅವಕಾಶ ಮಾಡಿಕೊಡಿ ಎಂದು ಜನರು ಬೇಡಿಕೆ ಇಟ್ಟಿದ್ದಾರೆ. ಮಾಹಿತಿ ಪ್ರಕಾರ ಈ ಮಿಚಿಗನ್ ಒಂದರಲ್ಲಿಯೇ 3ಸಾವಿರಕ್ಕೂ ಹೆಚ್ಚು ಜನರು ಕೊರೋನಾ ಗೆ ಬಲಿಯಾಗಿದ್ದಾರೆ.

error: Content is protected !!