fbpx

Please assign a menu to the primary menu location under menu

ಲಾಕ್-ಡೌನ್ ಎಫೆಕ್ಟ್: ನಡು ರಸ್ತೆಯಲ್ಲಿಯೇ ನಿದ್ದೆಗೆ ಜಾರಿದ ಸಿಂಹಗಳು (ವೀಡಿಯೋ)

ಕೊರೋನಾ ಮಹಾಮಾರಿಯಿಂದಾಗಿ ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ರಾಷ್ಟ್ರಗಳು ಲಾಕ್-ಡೌನ್ ಆಗಿವೆ. ರಸ್ತೆಯಲ್ಲಿ ವಾಹನಗಳ ಓಡಾಟಗಳು ನಿಂತು ಹೋಗಿದ್ದು, ಕಾಡಿನಲ್ಲಿ ಓಡಾಡುತ್ತಿದ್ದ ಪ್ರಾಣಿಗಳು ಇದೀಗ ಜನವಸತಿ ಪ್ರದೇಶಗಳಿಗೂ ಆಗಮಿಸಲು ಶುರು ಮಾಡಿದೆ.

ಜನರು ಲಾಕ್-ಡೌನ್ ನಿಂದ ಮನೆಯಲ್ಲಿ ಬಂಧಿಯಾಗಿದ್ದರೆ ಪ್ರಾಣಿಗಳು ಮಾತ್ರ ಯಾವುದರ ಪರಿವೇ ಇಲ್ಲದೆ ಸ್ವಚ್ಛಂದವಾಗಿ ಓಡಾಡಿಕೊಂಡಿದೆ. ದಕ್ಷಿಣ ಆಪ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹಗಳ ಹಿಂಡು ರಸ್ತೆಯ ಮೇಲೆಯೇ ನಿದ್ದೆಗೆ ಜಾರಿರುವ ಪೊಟೋಗಳು ಇದೀಗ ವೈರಲ್ ಆಗಿದೆ.

ಲಾಕ್-ಡೌನ್ ಗೂ ಮೊದಲು ಈ ರಸ್ತೆಯಲ್ಲಿ ಪ್ರವಾಸಿಗರ ವಾಹನಗಳ ಸಂಚಾರ ಅಧಿಕವಾಗಿತ್ತು, ಸಿಂಹಗಳು ರಾತ್ರಿ ಹೊತ್ತಿನಲ್ಲಿ ಮಾತ್ರ ಕಾಣಸಿಗುತ್ತಿತ್ತು. ಮಾರ್ಚ್ 25ರಿಂದ ಪಾರ್ಕ್ ಪ್ರವಾಸಿಗರಿಗೆ ಮುಚ್ಚಲಾಗಿದ್ದು, ವಾಹನ ಸಂಚಾರ ನಿಂತು ಹೋಗಿದೆ. ಇದೀಗ ಸಿಂಹಗಳು ಯಾವುದೇ ಭಯವಿಲ್ಲ ಹಗಲು ಹೊತ್ತಿನಲ್ಲೂ ರಸ್ತೆಯ ಮೇಲೆ ಓಡಾಟ ಶುರುಹಚ್ಚಿಕೊಂಡಿದೆ.

error: Content is protected !!