fbpx

ಬಿಸಿಲಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲೀಸರಿಗೆ ತಂಪುಪಾನೀಯ ತಂದು ಕೊಟ್ಟು ಬಡತನದಲ್ಲೂ ಶ್ರೀಮಂತಿಕೆ ಮೆರೆದ ಮಹಿಳೆಯರು, ವೀಡಿಯೋ ನೋಡಿ

ಕೊರೋನಾ ಸೋಂಕು ತಡೆಗೆ ದೇಶವೇ ಲಾಕ್-ಡೌನ್ ಆಗಿದೆ. ಪೋಲೀಸರು, ಡಾಕ್ಟರ್ ಗಳು, ಸ್ವಚ್ಚತಾ ಸಿಬ್ಬಂದಿಗಳು ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ದೇಶದ ಹಲವೆಡೆ ಈ ಕೊರೋನಾ ವಾರಿಯರ್ಸ್ ಗಳ ಮೇಲೆ ಕಲ್ಲು ತೂರಾಟ, ಹಲ್ಲೆ ಪ್ರಕರಣಗಳು ನಡೆಯುತ್ತಲಿದೆ.

ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಬಿಸಿಲಿನ ಜಳದ ಮಧ್ಯೆಯೂ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲೀಸರಿಗೆ ಬಡ ಮಹಿಳೆಯರು ತಂಪುಪಾನೀಯ ತಂದುಕೊಟ್ಟು ಹೃದಯವೈಶಾಲ್ಯತೆ ಮೆರೆದಿದ್ದಾರೆ. ಘಟನೆ ಆಂದ್ರಪ್ರದೇಶದಲ್ಲಿ ನಡೆದಿದ್ದು, ಮಹಿಳೆಯರ ಕೆಲಸಕ್ಕೆ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

Watch Video

error: Content is protected !!