ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಫಿಜಾ ಡೆಲಿವರಿ ಮಾಡುವ 19ವರ್ಷ ವಯಸ್ಸಿನ ಯುವಕನಿಗೂ ಕೊರೋನಾ ಸೋಂಕು ದೃಢಪಟ್ಟಿದ್ದು, ಇದೀಗ ಈತನ ಕೈಯಿಂದ ಫಿಜಾ ತರಿಸಿಕೊಂಡು ತಿಂದವರಿಗೂ ಆತಂಕ ಎದುರಾಗಿದೆ.
ಉತ್ತರ ದೆಹಲಿಯ ಮಾಲ್ವಿಯಾದ ರೆಸ್ಟೋರೆಂಟ್ ನಲ್ಲಿ ಫಿಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಕಳೆದ ಭಾನುವರದ ವರೆಗೂ ಗ್ರಾಹಕರಿಗೆ ಫಿಜಾ ಡೆಲಿವರಿ ಮಾಡಿದ್ದ. ಭಾನುವಾರದಂದು ಆತನಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಗೋಚರಿಸಿದ್ದು ಆಸ್ಪತ್ರೆಗೆ ದಾಖಲಿಸಿ ಗಂಟಲ ದ್ರವ ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಇದೀಗ ಯುವಕನಿಗೆ ಕೊರೋನಾ ದೃಢಪಟ್ಟಿದೆ.
ಕಳೆದ 15ದಿನದಲ್ಲಿ ಆತ 72 ಗ್ರಾಹಕರಿಗೆ ಫಿಜಾ ಡೆಲಿವರಿ ಮಾಡಿದ್ದ. ಇದೀಗ ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಈತನೊಂದಿಗೆ ಸಂಪರ್ಕದಲ್ಲಿ ಇದ್ದ 17 ಫಿಜಾ ಡೆಲಿವರಿ ಮಾಡುವ ಯುವಕರನ್ನೂ ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಲಾಗಿದೆ. ಇದೀಗ ಆನ್ಲೈನ್ ನಿಂದ ಆಹಾರ ತರಿಸಿಕೊಂಡು ತಿನ್ನುವುದು ಅಪಾಯಕಾರಿ ಸಾಬೀತಾಗಿದೆ.