fbpx

Please assign a menu to the primary menu location under menu

ಲಾಕ್-ಡೌನ್ ಉಲ್ಲಂಘಿಸಿ ಬಂಧನಕ್ಕೊಳಗಾದ ಈ ಮಹಿಳೆ ಸಿಟ್ಟಿಗೆದ್ದು ಮಾಡಿದ್ದೇನು ನೋಡಿ, ವೈರಲ್ ವೀಡಿಯೋ

ಕೊರೋನಾ ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಕ್ಕಾಗಿ ಪೋಲೀಸರಿಂದ ಬಂಧನಕ್ಕೊಳಗಾದ ಮಹಿಳೆ ಇದೇ ಸಿಟ್ಟಿಗೆ ಮಹಿಳೆ ವಿಚಿತ್ರವಾಗಿ ಪ್ರತಿಭಟನೆ ಮಾಡಿದ್ದಾಳೆ. ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದ್ದೇ ತಡ ಮನೆಗೆ ಬಂದ ಆಕೆ ಮತ್ತೆ ತನ್ನ ಪುಂಡಾಟ ತೋರಿಸಿದ್ದು ಎರಡನೇ ಬಾರಿಗೆ ಬಂಧನಕ್ಕೆ ಒಳಗಾಗಿದ್ದಾಳೆ.

ಸ್ಪೇನ್ ಟೊರೆಮೊಲಿನೋಸ್ ನಗರದ ಕೋಸ್ಟಾ ಡೆಲ್ ಸಾಲ್ ರೆಸಾರ್ಟ್ ನಲ್ಲಿ ವಾಸವಿದ್ದ 41 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ಬಿಡುಗಡೆಯಾದ ನಂತರ ತನ್ನೆಲ್ಲಾ ಬಟ್ಟೆ ಬಿಚ್ಚಿ ಎಸೆದು ಬೆತ್ತಲಾಗಿ ಕಾರಿನ ಮೇಲೆ ಹತ್ತಿ ಘೋಷಣೆ ಕೂಗಿದ್ದಾಳೆ.

ಆಕೆಯ ನೆರೆಹೊರೆಯ ಮನೆಯವರಿಗೂ ಮಹಿಳೆ ಕಿರಿಕಿರಿ ನೀಡಿದ್ದಾಳೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಈ ವೇಳೆಯೇ ಬೆತ್ತಲಾಗಲು ಯತ್ನ ಮಾಡಿದ್ದಾಳೆ. ಆದರೆ ಅದು ಸಾಧ್ಯವಾಗಿಲ್ಲ.

ಹದ್ದು ಮೀರಿ ವರ್ತಿಸುತ್ತಿದ್ದ ಮಹಿಳೆಯನ್ನು ಅದು ಹೇಗೋ ಹರಸಾಹಸ ಮಾಡಿ ಆಂಬುಲೆನ್ಸ್ ಮೂಲಕ ಸಾಗಿಸಲಾಗಿದೆ.

video

error: Content is protected !!