ಜಮ್ಮು-ಕಾಶ್ಮೀರದ ಕೇರನ್ ವಲಯದ ದುಧ್ನಿಯಲ್ ಪ್ರದೇಶದಲ್ಲಿ ಭಯೋತ್ಪಾದಕರ ಉಡಾವಣಾ ಪ್ಯಾಡ್ಗಳ ಮೇಲೆ ಭಾರತೀಯ ಸೇನೆ ಫಿರಂಗಿದಳದ ಮೂಲಕ ಏಪ್ರಿಲ್ 10 ರಂದು ದಾಳಿ ನಡೆಸಿದೆ. ಭಾರತೀಯ ಸೇನೆಯ ಈ ದಾಳಿಯಲ್ಲಿ ಎಂಟು ಭಯೋತ್ಪಾದಕರು ಮತ್ತು 15 ಪಾಕಿಸ್ತಾನ ಸೇನಾ ಸೈನಿಕರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ತಿಳಿಸಿದೆ.
ದೇಶದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಪದೇಪದೇ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಪ್ರತ್ಯುತ್ತರವಾಗಿ ಕಿಶನ್ಗಂಗಾ ನದಿಯ ದಡದಲ್ಲಿ ದುಧ್ನಿಯಲ್ ಪ್ರದೇಶವನ್ನು ಗುರಿಯಾಗಿಸಿಕೊಂಡು ಭಾರತೀಯಸೇನೆ ದಾಳಿ ನಡೆಸಿದೆ.
ಇದೀಗ ಭಾರತೀಯ ಸೈನಿಕರು ಲಾಕೆಟ್ ಲಾಂಚರ್ ಗಳ ಮೂಲಕ ಪಾಪಿ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಇಲ್ಲಿದೆ ನೋಡಿ.