ಲಾಕ್-ಡೌನ್ ಹಿನ್ನೆಲೆಯಲ್ಲಿ ಗಾಡಿಗಳನ್ನು ತಪಾಸಣೆ ಮಾಡುತ್ತಿದ್ದ ಪೋಲೀಸ್ ಅಧಿಕಾರಿಯ ಕೈಯನ್ನೇ ತಲವಾರ್ ನಿಂದ ಕತ್ತರಿಸಿ ಹಾಕಿದ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ. ಗಾಡಿ ತಪಾಸಣೆ ನಡೆಸುತ್ತಿದ್ದ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಗಾಡಿತಡೆದು ಪಾಸ್ ಕೇಳಿದ್ದೇ ತಡ ಕೋಪಗೊಂಡ 3-4 ಜನರನ್ನೊಳಗೊಂಡ ‘ಸಿಖ್ ನಿಹಾಂಗಿಗಳ’ ಗುಂಪು ವಾಹನದಲ್ಲಿದ್ದ ತಮ್ಮ ವಾಹನದಲ್ಲಿದ್ದ ಆಯುಧಗಳಿಂದ ಪೋಲೀಸ್ ಅಧಿಕಾರಿಯ ಕೈಯನ್ನೇ ಕತ್ತರಿಸಿ ಹಾಕಿದ್ದಾರೆ.
ಘಟನೆಯಲ್ಲಿ ಮತ್ತೆ ಇಬ್ಬರು ಪೋಲೀಸ್ ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿದೆ. ಘಟನೆಯ ನಂತರ ದಾಳಿಕೋರರು ಸ್ಥಳದಿಂದ ಕಾಲ್ಕಿತ್ತಿದ್ದು, ಪೋಲೀಸರು ಹುಡುಕಾಟದಲ್ಲಿ ನಿರತರಾಗಿದ್ದಾರೆ. ಗಾಯಗೊಂಡ ಪೋಲೀಸ್ ಅಧಿಕಾರಿಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
In an unfortunate incident today morning, a group of Nihangs injured a few Police officers and a Mandi Board official at Sabzi Mandi, Patiala. ASI Harjeet Singh whose hand got cut-off has reached PGI Chandigarh: Dinkar Gupta, Director General of Police (DGP) Punjab (in file pic) pic.twitter.com/6elj2QYYBv
— ANI (@ANI) April 12, 2020