ಪ್ರಪಂಚ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದ್ದರೆ ಭಾರತ ಮಾತ್ರ ಕೊರೋನಾ ವೈರಸ್ ಜೊತೆಗೆ ಇಸ್ಲಾಮಿಕ್ ಜಿಹಾದ್ ಎಂಬ ಪಿಡುಗಿನ ವಿರುದ್ಧವೂ ಹೋರಾಡಬೇಕಾದ ಅನಿವಾರ್ಯತೆ ಇದೆ. ಪಾಪಿ ಪಾಕಿಸ್ತಾನ ಗಡಿಯಲ್ಲಿ ಮತ್ತೆ ತನ್ನ ಪುಂಡತನವನ್ನು ಮುಂದುವರೆಸಿದ್ದು ಪಾಕಿ ಸೇನೆಯನ್ನು ಬಳಸಿ ಇಸ್ಲಾಮಿಕ್ ಉಗ್ರರನ್ನು ಭಾರತದ ಗಡಿಯೊಳಕ್ಕೆ ನುಗ್ಗಿಸುವ ಕುತಂತ್ರ ಮುಂದುವರೆಸಿದೆ. ಇದಕ್ಕಾಗಿ ಭಾರತದ ಗಡಿಯಾಚೆ ಉಗ್ರ ಲಾಂಚ್-ಪ್ಯಾಡ್ ಗಳನ್ನು ನಿರ್ಮಿಸಿದ್ದು, ಉಗ್ರರನ್ನು ಒಳನುಸುಳಿಸಲು ಯತ್ನಿಸುತ್ತಿದೆ.
ಶುಕ್ರವಾರ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು, ಉಗ್ರರ ಲಾಂಚ್-ಪ್ಯಾಡ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಕೇರನ್ ಸೆಕ್ಟರ್ನ ಕುಪ್ವಾರ ಬಳಿ ಈ ದಾಳಿಗಳು ನಡೆದಿದ್ದು, ಒಂದು ಲಾಂಚ್ಪ್ಯಾಡ್ ಸಂಪೂರ್ಣ ಧ್ವಂಸಗೊಂಡಿದೆ. 105 ಎಂಎಂ ಫೀಲ್ಡರ್ ಗನ್ ಮತ್ತು 155 ಬೋಫೋರ್ಸ್ ಹೌವಿಟ್ಸರ್ಗಳನ್ನು ಬಳಸಿ ಭಾರತೀಯ ಯೋಧರು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಭಾಗದಲ್ಲಿ ಹೆಚ್ಚಿನ ಆಸ್ತಿಪಾಸ್ತಿ ಮತ್ತು ಪ್ರಾಣ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತೀಯ ಪಾಳೆಯದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.