ದೆಹಲಿಯಾ ನಿಜಾಮುದ್ದೀನ್ ಮಸೀದಿ ದೇಶಾದ್ಯಂತ ಕೊರೋನಾ ಪ್ರಕರಣದ ಕೇಂದ್ರ ಬಿಂದುವಾದ ನಂತರವೂ ಜನ ಇದರಿಂದ ಪಾಠ ಕಲಿತಿಲ್ಲ. ದೇಶವೇ ಲಾಕ್ ಡೌನ್ ನಲ್ಲಿ ಇದ್ದರೂ ದೇಶದ ಕೆಲವು ಭಾಗದಲ್ಲಿ ಇನ್ನೂ ಸಾಮೂಹಿಕ ಪ್ರಾರ್ಥನೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ.
ಸರ್ಕಾರದ ಆದೇಶ ಉಲ್ಲಂಘಿಸಿ ಶುಕ್ರವಾರದ ನಮಾಜ್ ಗಾಗಿ ನೂರಾರು ಮಂದಿ ಒಟ್ಟುಗೂಡಿದ ಘಟನೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಲ್ಲಿ ನಡೆದಿದೆ. ನಮಾಜ್ ನಲ್ಲಿ ಭಾಗವಹಿಸಿದ್ದ ಮುಸ್ಲಿಮರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಿಡಿ, ಮಾಸ್ಕ್ ಕೂಡ ಧರಿಸಿರಲಿಲ್ಲ.
ಚಿಕ್ಕಮಕ್ಕಳು, ದೊಡ್ಡವರು ಸೇರಿ ನೂರಾರು ಮಂದಿ ನಮಾಜ್ ನಲ್ಲಿ ಭಾಗವಹಿಸಿದ್ದರು. ಪೋಲೀಸರು ಕೂಡ ನಮಾಜಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಅಲ್ಲಿಂದ ತೆರಳಲು ಅವಕಾಶ ಮಾಡಿಕೊಟ್ಟದ್ದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿಯಂತಹ ಘಟನೆ ಮತ್ತೆ ಉದ್ಭವಿಸದಿರಲಿ ಎಂಬುದು ಜನರ ಆಶಯ.