fbpx

ಲಾಕ್-ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದ್ರೂ ಪೋಲೀಸರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡ ಮಕ್ಕಳು, ವೀಡಿಯೋ ನೋಡಿ

ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಪೋಲೀಸರು ಲಾಠಿ ಬೀಸೋದು ನೋಡಿರ್ತೀರ ಆದರೆ ಮಕ್ಕಳಿಬ್ಬರು ಲಾಕ್-ಡೌನ್ ಸಂದರ್ಭದಲ್ಲಿ ತಮ್ಮ ಪಾಕೆಟ್ ಬೈಕ್ ಗಳ ಮೂಲಕ ರಸ್ತೆಗೆ ಇಳಿದ್ರೂ ಪೋಲೀಸರು ಇವರಿಗೆ ಬೈಯೋ ಬದಲು ಶಹಬ್ಬಾಸ್ ಹೇಳಿದ್ದಾರೆ. ಇದಕ್ಕೇ ಕಾರಣವೂ ಇದೆ, ಈ ಮಕ್ಕಳು ತಾವು ನಡೆಸೋ ಯೂಟ್ಯೂಬ್ ಚಾನಲ್ ಮೂಲಕ ಸಂಪಾದಿಸಿದ 5,000 ರೂಪಾಯಿ ಹಣವನ್ನು ಬಡವರ ಸಹಾಯಕ್ಕಾಗಿ ದೇಣಿಗೆ ನೀಡಲು ರಸ್ತೆಗೆ ಇಳಿದಿದ್ದರು.

ಲಾಕ್-ಡೌನ್ ನಿಮಿತ್ತ ಕಾರ್ಯನಿರ್ವಹಿಸುತ್ತಿದ್ದ ಪೋಲೀಸರು ಇವರನ್ನು ತಡೆದು ನಿಲ್ಲಿಸಿ ರಸ್ತೆಗೆ ಇಳಿದ ಕಾರಣ ಕೇಳಿದ್ರೆ, ಈ ಮಕ್ಕಳು ನಾವು ಲಾಕ್-ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರೋ ಬಡವರಿಗೆ ದೇಣಿಗೆ ನೀಡಲು ಬಂದಿದ್ದಾಗಿ ಹೇಳಿದ್ದಾರೆ ಅಲ್ಲದೆ ತಾವು ಯೂಟ್ಯೂಬ್ ಮೂಲಕ ಸಂಪಾಸಿದ್ದ ಹಣವನ್ನು ಪೋಲೀಸ್ ಅಧಿಕಾರಿಗೆ ನೀಡಿ ಅದನ್ನು ಕಷ್ಟದಲ್ಲಿರುವವರಿಗೆ ತಲುಪಿಸುವಂತೆ ಕೇಳಿಕೊಂಡಿದ್ದಾರೆ. ವೀಡಿಯೋ ನೋಡಿ,

error: Content is protected !!