ಇಂದು ಮುಂಜಾನೆ ಜಮ್ಮುವಿನ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಕುಲಗಾಂನಲ್ಲಿ ಉಗ್ರರನ್ನು ಸೆರೆಹಿಡಿಯಲು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಉಗ್ರರು ದಿಢೀರ್ ಗುಂಡಿನ ದಾಳಿ ನಡೆಸಿದ್ದರಿಂದ ಎನ್ಕೌಂಟರ್ ಮೂಲಕ ಕುಲಾಂನ ಹರ್ದಮಂಡ್ ಗುರಿ ಎಂಬ ಗ್ರಾಮದಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಕಾರ್ಡಾನ್ನಲ್ಲಿ ಏಳು ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿತ್ತು. ಈ ಉಗ್ರರು ಇತ್ತೀಚೆಗೆ ಕುಲಗಾಂನಲ್ಲಿ ವಾಸವಾಗಿದ್ದ ಮೂವರನ್ನು ಹತ್ಯೆ ಮಾಡಿದ್ದರು. ಈ ಉಗ್ರರನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದಾಗ ಮೂವರನ್ನು ಎನ್ಕೌಂಟರ್ ಮಾಡಲಾಗಿದೆ, ಇನ್ನೂ ನಾಲ್ಕು ಜನ ಉಗ್ರರು ಸ್ಥಳದಲ್ಲಿದ್ದು ಸೈನಿಕರು ಘೇರಾವ್ ಮಾಡಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.
Jammu and Kashmir: Encounter underway between security forces & terrorists in Manzgam of Kulgam. According to the police, 2 terrorists reportedly killed so far. (visuals deferred by unspecified time) pic.twitter.com/mYodL4iYvn
— ANI (@ANI) April 4, 2020