fbpx

ನೀರಿಗೆ ಬಿಸ್ಕಿಟ್ ಅದ್ದಿ ತಿನ್ನುತ್ತಿರುವ ಪೋಲೀಸ್, ವೈರಲ್ ವೀಡಿಯೋ ನೋಡಿ

ಒಂದೆಡೆ ಕೊರೊನಾ ಭೀತಿಯಿಂದ ಜನ ಮನೆಯಲ್ಲೇ ಬೆಚ್ಚಗಿದ್ರೆ, ಈ ಮಹಾಮಾರಿ ರೋಗ ಹರಡೋದನ್ನ ತಡಿಯೋಕ್ಕೆ ಅಂತಾ ನಮ್ಮ ಪೊಲೀಸರನ್ನು ಹೊರಗೆ ಬಿರುಬಿಸಿಲಿನಲ್ಲಿ ನಿಂತು ಕಾವಲು ಕಾಯ್ತಿದ್ದಾರೆ. ಸುಮ್ ಸುಮ್ನೆ ಹೊರಗೆ ಬಿದ್ದೋರಿಗೆ ಮೊದ ಮೊದಲು ಲಾಠಿ ಏಟು, ಬಸ್ಕಿ ಶಿಕ್ಷೆ ಕೊಟ್ಟು ಕೂರಿಸಿದರು. ಕೆಲವೆಡೆ ಹೊಡೆತ ಮಿತಿ ಮೀರಿದ್ದಕ್ಕಾಗಿ ಪೊಲೀಸರನ್ನು ಬೈಯ್ದುಕೊಂಡಿದ್ದು ಆಯ್ತು.

ಇದೀಗ ಟ್ರಾಫಿಕ್ ಪೊಲೀಸರೊಬ್ಬರು ಕುಡಿಯಲು ಕಾಫಿ, ಟೀ ಇಲ್ಲದೇ, ಬಿಸ್ಕಿಟ್ ಹಿಡಿದು ನೀರು ಹಾಕಿ, ನೆನೆಸಿ ತಿನ್ನುತ್ತಿರುವ ದೃಶ್ಯ ವೈರಲ್ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸುದ್ದಿ ಮಾಡುತ್ತಿದ್ದು, ಈಗಲಾದರೂ ಜನ ಪೊಲೀಸರ ಕರ್ತವ್ಯಕ್ಕೆ ಗೌರವ ನೀಡಿ ಮನೆಯಲ್ಲಿರಲಿ ಎಂಬುದೇ ನಮ್ಮ ಆಶಯ. ವೀಡಿಯೋ ನೋಡಿ,

error: Content is protected !!