fbpx

ನಿಮಗೆ ಕೊರೋನಾ ಸೋಂಕು ತಗುಲಿದ್ದರೂ ಆಸ್ಪತ್ರೆಗೆ ದಾಖಲಾಗಬೇಡಿ, ಮೌಲ್ವಿಯಿಂದ ತನ್ನ ಬೆಂಬಲಿಗರಿಗೆ ಸಂದೇಶ (ವೀಡಿಯೋ)

ಕೊರೋನಾ ವೈರಸ್ ಹಾಟ್-ಸ್ಪಾಟ್ ಆಗಿ ಬದಲಾಗಿರುವ ದೆಹಲಿಯ ನಿಜಾಮುದ್ದೀನ್ ಮಸೀದಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾವಿರಾರು ಮಂದಿಯಿಂದ ಇದೀಗ ಇಡೀ ಭಾರತಕ್ಕೆ ಕೊರೋನಾ ಕಂಟಕ ಎದುರಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ 10ಮಂದಿ ಈಗಾಗಲೇ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರೆ, 40ಕ್ಕೂ ಹೆಚ್ಚುಮಂದಿಗೆ ಸೊಂಕು ದೃಢವಾಗಿದೆ. ಅಲ್ಲೆ 400ಕ್ಕೂ ಹೆಚ್ಚು ಮಂದಿಗೆ ಸೋಂಕಿನ ಲಕ್ಷಣಗಳು ಗೋಚರಿಸಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಹುತೇಕರು ದೇಶದಾದ್ಯಂತ ಸಂಚರಿಸಿದ್ದಾರೆ. ಇದರಿಂದ ಇಡೀ ದೇಶವೇ ಬೆಚ್ಚಿಬಿದ್ದಿದ್ದು, ಆದಷ್ಟು ಬೇಗ ಎಲ್ಲರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲು ಕೇಂದ್ರಸರ್ಕಾರ ಹಾಗೂ ಆಯಾಯ ರಾಜ್ಯ ಸರ್ಕಾರಗಳು ತೊಡಗಿಕೊಂಡಿದೆ. ಇದೀಗ ಈ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ ಮೌಲ್ವಿಯ ಆಡಿಯೋ ಟೇಪ್ ಒಂದು ವೈರಲ್ ಆಗಿದ್ದು ಇದು ದೇಶದ ಜನರಲ್ಲಿ ಇನ್ನಷ್ಟು ಆತಂಕಕ್ಕೀಡುಮಾಡಿದೆ.

ಆಡಿಯೋ ಟೇಪ್ ನಲ್ಲಿ ಮೌಲ್ವಿ ಸಾದ್ ದೆಹಲಿ ಇಸ್ಲಾಮಿಕ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾವಿರಾರು ಜನರಿಗೆ ಸಂದೇಶ ರವಾನಿಸಿದ್ದು, ನಿಮಗೆ ಕೊರೋನಾ ಸೋಂಕು ತಗುಲಿದ್ದರೂ ಯಾವುದೇ ಕಾರಣಕ್ಕೂ ಆಸ್ಪತ್ರೆಗೂ ದಾಖಲಾಗಬೇಡಿ, ಮಸೀದಿಯಿಂದ ಹೊರಬರಬೇಡಿ, ವೈದ್ಯರ ಸಲಹೆಯನ್ನೂ ಪಡೆಯಬೇಡಿ ಎಂದು ಆದೇಶ ನೀಡಿದ್ದಾನೆ. ಕೊರೋನಾ ತಗುಲಿದರೂ ನಿಮಗೆ ಯಾವುದೇ ತೊಂದರೆಯಾಗಲ್ಲ, ಒಂದು ವೇಳೆ ನೀವು ಸತ್ತರೂ ಮಸೀದಿಗಿಂತ ಒಳ್ಳೆ ಸ್ಥಳ ಬೇರೆ ಇಲ್ಲ ಎಂದು ಹೇಳಿದ್ದಾನೆ.

ಇದೇ ಕಾರ್ಯಕ್ರಮದಲ್ಲಿ ಕರ್ನಾಟಕದ ಸುಮಾರು 45 ಮಂದಿ ಕೂಡ ಭಾಗವಹಿಸಿದ್ದಾರೆ. ಶಿರಾದಲ್ಲಿ ಮೃತಪಟ್ಟ ವ್ಯಕ್ತಿ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದವರಿಗೆಲ್ಲಾ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದೀಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದ್ದು, ಕ್ವಾರಂಟೈನ್ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಆದರೆ ಮೌಲಾನ ಹರಿಬಿಟ್ಟಿರುವ ಆಡಿಯೋ ಟೇಪ್ ಇದೀಗ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಪತ್ತೆಗೆ ತೊಡಕಾಗಿ ಪರಿಣಮಿಸಿದೆ.

ವೀಡಿಯೋ ನೋಡಿ:

error: Content is protected !!