fbpx

ಕೊರೋನ ಸೋಂಕಿಗೆ ಚೀನಾದಲ್ಲಿ ಸತ್ತವರೆಷ್ಟು, ಚೀನಾದ ವುಹಾನ್ ನಿವಾಸಿಗಳು ಹೇಳಿದ ಸಾವಿನ ಪ್ರಮಾಣ ಕೇಳಿದ್ರೆ ಬೆಚ್ಚಿಬೀಳ್ತೀರ, ನೋಡಿ ಇಲ್ಲಿದೆ ಡಿಟೈಲ್ಸ್

ಚೀನಾದಲ್ಲಿ ಹುಟ್ಟಿಕೊಂಡ ಕೊರೋನಾ ವೈರಸ್ ಸೋಂಕು ಇದೀಗ ಇಡೀ ವಿಶ್ವವನ್ನೇ ನರಕವನ್ನಾಗಿಸಿದೆ. ಈ ಸೋಂಕು ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ಪ್ರಾಂತ್ಯದಲ್ಲಿ. ಚೀನಾ ಸರ್ಕಾರದ ಅಂಕಿಅಂಶದ ಪ್ರಕಾರ ಕೊರೋನಾ ಸೋಂಕಿಗೆ ಚೀನಾದಲ್ಲಿ ಇದುವರೆಗೆ ಸುಮಾರು 3300ಮಂದಿ ಮೃತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದೀಗ ಈ ಅಂಕಿ ಅಂಶಗಳು ಸುಳ್ಳು ಎಂದು ಚೀನಾದ ವುಹಾನ್ ನಗರದ ನಿವಾಸಿಗಳೇ ಹೇಳುತ್ತಿದ್ದಾರೆ.

ಚೀನಾ ಸರ್ಕಾರ ನೀಡಿರುವ ಅಂಕಿಅಂಶಗಳನ್ನು ತಳ್ಳಿಹಾಕುವ ವುಹಾನ್ ನಿವಾಸಿಗಳು ಇಡೀ ಜಗತ್ತನ್ನೇ ಬೆಚ್ಚಿಬೀಳಿಸುವ ಸತ್ಯವನ್ನು ಬಯಲು ಮಾಡಿದ್ದಾರೆ. ಹೌದು, ಚೀನಾದಲ್ಲಿ ಇದುವರೆಗೆ ಕೊರೋನ ಸೋಂಕಿಗೆ ಬಲಿಯಾಗಿದ್ದು 3,300 ಮಂದಿಯಲ್ಲ ಬದಲಾಗಿ 40,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸತ್ಯ ಬಿಚ್ಚಿಟ್ಟಿದ್ದು ಬೇರಾರು ಅಲ್ಲ, ಚೀನಾದಲ್ಲಿ ಕೊರೋನ ವೈರಸ್ ರುದ್ರನರ್ತನವಾಡಿದ ವುಹಾನ್ ನಗರದ ನಿವಾಸಿಗಳೇ ಚೀನಾ ಸರ್ಕಾರದ ಸುಳ್ಳನ್ನು ಬಯಲು ಮಾಡಿರೋದು.

ವುಹಾನ್ ನಿವಾಸಿಗಳ ಪ್ರಕಾರ, ಕೊರೋನ ಸಾವಿನಲ್ಲಿ ಚೀನಾ ಸರ್ಕಾರ ಅಸಲಿ ಅಂಕಿಅಂಶಗಳನ್ನು ನೀಡಿಲ್ಲ. ಚೀನಾ ಸರ್ಕಾರ ವುಹಾನ್ ನಗರದಲ್ಲಿ ಸುಮಾರು 2,500ಜನ ಬಲಿಯಾಗಿದ್ದಾರೆ ಎನ್ನುತ್ತಿದೆ. ಆದರೆ ಶುದ್ದ ಸುಳ್ಳು, ಕೇವಲ ವುಹಾನ್ ನಗರವೊಂದರಲ್ಲೇ 42,000ಕ್ಕೂ ಹೆಚ್ಚು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ವುಹಾನ್ ನಗರದಲ್ಲಿ 7 ಪ್ರತ್ಯೇಕ ಸ್ಮಶಾನಗಳಿದ್ದು, ಪ್ರತಿ ಸ್ಮಶಾನದಿಂದ ಪ್ರತಿ ದಿನ 500 ಭಸ್ಮಕರಂಡಗಳನ್ನು ಮೃತ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ. ಅಂದ್ಮೇಲೆ, ದಿನವೊಂದಕ್ಕೆ 3500 ಮೃತರ ಚಿತಾಭಸ್ಮ ವಿತರಿಸಿದ ಹಾಗೆ ಲೆಕ್ಕ.

ಇನ್ನು ಹಾಂಕಾವ್, ವುಚಾಂಗ್ ಮತ್ತು ಹಾನ್ಯಾಂಗ್ ನಲ್ಲಿರುವ ನಿವಾಸಿಗಳಿಗೆ ಏಪ್ರಿಲ್ 5 ರ ಒಳಗೆ ಚಿತಾಭಸ್ಮವನ್ನು ನೀಡುವುದಾಗಿ ತಿಳಿಸಲಾಗಿದೆ. ಅಲ್ಲಿಗೆ, ಲೆಕ್ಕಾಚಾರದ ಪ್ರಕಾರ 12 ದಿನಗಳಲ್ಲಿ 42,000 ಮೃತರ ಬೂದಿಗಡಿಗೆಯನ್ನ ಹಸ್ತಾಂತರಿಸಿದ ಹಾಗೆ ಆಗುತ್ತದೆ.

ಅಲ್ಲದೆ ಹಲವು ಕೊರೋನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗೋ ಮೊದಲೇ ಮನೆಯಲ್ಲೇ ಮೃತರಾಗಿದ್ದಾರಂತೆ, ಅಂತಹವರನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ. News Source

error: Content is protected !!