ದೆಹಲಿಯ ನಿಜಾಮುದ್ದೀನ್ ಪಶ್ಚಿಮ ಏರಿಯಾದ ಮಸೀದಿಯಲ್ಲಿ ಮಾ.1ರಿಂದ 15ರ ವರೆಗೆ ನಡೆದ ಇಸ್ಲಾಮಿಕ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 2000ಮುಸ್ಲಿಮರಿಗೆ ಕೊರೋನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ. ಇದರಲ್ಲಿ ಈಗಾಗಲೇ 10ಜನ ಕೊರೋನಾ ವೈರಸ್ ನಿಂದ ಸಾವಿಗೀಡಾಗಿದ್ದರೆ, 400ಜನರಲ್ಲಿ ಕೊರೋನ ಲಕ್ಷಣಗಳು ಈಗಾಗಲೇ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ.
ವಿಶ್ವದಾದ್ಯಂತ ಕೊರೋನಾ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಇಂತಹ ಧಾರ್ಮಿಕ ಸಭೆ ಆಯೋಜನೆ ಮಾಡಿದ್ದು ಯಾರು, ಇದಕ್ಕೆ ಅವಕಾಶ ನೀಡಿದ್ದು ಯಾರು ಎಂಬುದು ಇದೀಗ ಎಲ್ಲರಲ್ಲೂ ಗೊಂದಲಕ್ಕೀಡು ಮಾಡಿದೆ. ಈ ಧಾರ್ಮಿಕ ಸಭೆಗೆ ಕೊರೋನಾ ಪೀಡಿತ ಇಂಡೊನೇಷ್ಯಾ, ಮಲೇಶ್ಯಾ ಹಾಗೂ ಸೌದಿ ಅರೇಬಿಯಾಗಳಿಂದ ಮುಸ್ಲಿಮರು ಆಗಮಿಸಿದ್ದರು ಎಂದು ತಿಳಿದುಬಂದಿದೆ.
ಇದೀಗ ಇಲ್ಲಿ ಪಾಲ್ಗೊಂಡು ಕೊರೋನಾ ಸೋಂಕಿಗೆ ಬಲಿಯಾದವರಲ್ಲಿ 6ಜನ ತೆಲಂಗಾಣ ಮೂಲದವರಾಗಿದ್ದರೆ..ಕರ್ನಾಟಕ, ತಮಿಳುನಾಡು ಹಾಗೂ ಕಾಶ್ಮೀರದಲ್ಲಿ ಒಬ್ಬ ಸಾವಿಗೀಡಾಗಿದ್ದಾನೆ. ಇನ್ನೊಬ್ಬ ಫಿಲಿಪೈನ್ಸ್ ಮೂಲದ ಪ್ರಜೆಯೂ ಬಲಿಯಾದ ಬಗ್ಗೆ ವರದಿಯಾಗಿದೆ. ಹೀಗೆ ಈ ಮಸೀದಿ ಇದೀಗ ಕೊರೋನ ವೈರಸ್ ಹಾಟ್-ಸ್ಪಾಟ್ ಆಗಿದೆ.