fbpx

Please assign a menu to the primary menu location under menu

ಲಾಕ್-ಡೌನ್ ನಿಂದ ಸಂಕಷ್ಟದಲ್ಲಿರುವ ಬಡ-ನಿರ್ಗತಿಕರಿಗೆ ಸಹಾಯ ಮಾಡುತ್ತಿರುವ ಆರೆಸ್ಸೆಸ್ ಗೆ 5ಲಕ್ಷ ಧನಸಹಾಯ ಮಾಡಿದ ಮುಸ್ಲಿಂ ಮಹಿಳೆ, ಹಜ್ ಯಾತ್ರೆಗೆ ಕೂಡಿಟ್ಟ ಹಣ ಬಡವರಿಗೆ ದಾನ

ಕೊರೋನಾ ವೈರಸ್ ತಡೆಗಟ್ಟಲು ರಾಷ್ಟ್ರವ್ಯಾಪ್ತಿ ಲಾಕ್ ಡೌನ್ ಹೇರಿಕೆಯಾಗಿರೋದರಿಂದ ಬಡವರು, ದಿನಗೂಲಿ ನೌಕರರು ಹಾಗೂ ನಿರ್ಗತಿಕರು ತೀರ ಸಂಕಷ್ಟದಲ್ಲಿದ್ದಾರೆ. ಇದೀಗ ಆರೆಸ್ಸೆಸ್ ಅಂಗಸಂಸ್ಥೆ ಸೇವಾಭಾರತಿ ಇವರ ಬೆನ್ನಿಗೆ ನಿಂತಿದೆ. ಕಷ್ಟದಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ತನ್ನ ಸ್ವಯಂಸೇವಕರ ಮೂಲಕ ಉಚಿತವಾಗಿ ಸರಬರಾಜು ಮಾಡುತ್ತಿದೆ.

ಇದನ್ನು ನೋಡಿದ ಮುಸ್ಲಿಂ ಮಹಿಳೆಯೊಬ್ಬರು, ತಾವು ಹಜ್ ಯಾತ್ರೆಗೆ ತೆರಳಲು ಕೂಡಿಟ್ಟ 5ಲಕ್ಷ ಹಣವನ್ನು ಆರೆಸ್ಸೆಸ್ ಅಂಗಸಂಸ್ಥೆ ಸೇವಾಭಾರತಿಗೆ ನೀಡಿದ್ದಾರೆ. ಪ್ರತಿ ವರ್ಷ ಹಜ್ ಯಾತ್ರೆಗೆ ತೆರಳುವ ಖಲೀದ ಬೇಗಂ, ಈ ವರ್ಷ ಕೊರೋನಾ ಕಾರಣದಿಂದ ತೆರಳಲು ಸಾಧ್ಯವಾಗಿಲ್ಲ. ಹೀಗೆ ಉಳಿದ ಹಣವನ್ನೇ ಕಷ್ಟದಲ್ಲಿರುವವರಿಗೆ, ನಿರ್ಗತಿಕರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿ ಎಂದು ಅವರು ಸೇವಾ ಭಾರತಿಗೆ ನೀಡಿದ್ದಾರೆ. ಖಲೀದ ಬೇಗಂ ಧನಸಹಾಯ ಮಾಡಿದ ಬಗ್ಗೆ ಆರೆಸ್ಸೆಸ್ ಮಾಧ್ಯಮ ವಿಭಾಗ ಇಂದ್ರಪ್ರಸ್ಥ ವಿಶ್ವಸಂವಾದ ಕೇಂದ್ರದ ಮುಖ್ಯಸ್ಥ ಅರುಣ್ ಆನಂದ್ ತಿಳಿಸಿದ್ದಾರೆ

error: Content is protected !!