fbpx

ಹಿಂದೂಗಳಿಗೆ ಕೊರೋನ ಹರಡಲು ಊಟದ ತಟ್ಟೆಗೆ ತಮ್ಮ ಎಂಜಲು ಹಚ್ಚುತ್ತಿದ್ದಾರ ಮುಸ್ಲಿಮರು, ವೈರಲ್ ವೀಡಿಯೋ ಹಿಂದಿನ ಸತ್ಯಾಂಶ

ಕೊರೋನ ಸೋಂಕು ಪ್ರಪಂಚದಾದ್ಯಂತ ಮರಣಮೃದಂಗವನ್ನೇ ಮುಂದುವರೆಸಿದೆ. ಭಾರತದಲ್ಲಿಯೂ ಇದುವರೆ ಸೋಂಕಿಗೆ 20ಜನ ಬಲಿಯಾಗಿದ್ದರೆ 800ಕ್ಕೂ ಹೆಚ್ಚು ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆಯೇ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಮುಸ್ಲಿಮರು ಹಿಂದೂಗಳಿಗೆ ಕೊರೋನಾ ಸೋಂಕು ಹರಡಲು ಊಟದ ತಟ್ಟೆ, ಸ್ಪೂನ್ ಗಳಿಗೆ ತಮ್ಮ ಕೋರೋನ ಸೋಂಕಿತ ಎಂಜಲು ಹಚ್ಚುತ್ತಿದ್ದಾರೆ ಎಂದು ವೈರಲ್ ಮಾಡಲಾಗುತ್ತಿದೆ.

ನಿನ್ನೆಯಷ್ಟೆ ಬೆಂಗಳೂರಿನಲ್ಲಿ ಮುಸ್ಲಿಂ ಟೆಕ್ಕಿಯೊಬ್ಬ ಕೊರೋನ ವೈರಸ್ ಹರಡುವಂತೆ ಜನರಿಗೆ ಕರೆನೀಡಿದ್ದ. ಆತನನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದಾದ ಬಳಿಕ ಈ ವೀಡಿಯೋ ಹೆಚ್ಚುಹೆಚ್ಚು ವೈರಲ್ ಆಗಲು ಶುರುವಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಮುಸ್ಲಿಮರು ಊಟದ ತಟ್ಟೆಗೆ ಎಂಜಲು ಮಾಡಿ ಹಿಂದೂಗಳಿಗೆ ಕೊರೋನ ವೈರಸ್ ಹರಡುತ್ತಿದ್ದಾರೆ ಎಂಬ ಒಕ್ಕಣಿಕೆಯೊಂದಿಗೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ವಾಸ್ತವವಾಗಿ ಇದೊಂದು ಶುದ್ದ ಸುಳ್ಳುಸುದ್ದಿಯಾಗಿದೆ. ವೈರಲ್ ಆಗುತ್ತಿರುವ ವೀಡಿಯೋ ಮುಸ್ಲಿಂ ದಾವೂದಿ ಬೋಹ್ರ ಸಮುದಾಯದ್ದಾಗಿದೆ. ಆ ಸಮುದಾಯದ ಸಂಪ್ರದಾಯ ಇದಾಗಿದ್ದು, ಊಟದ ನಂತರ ಸ್ವಲ್ಪ ಆಹಾರವೂ ವ್ಯರ್ಥವಾಗದಂತೆ ಊಟದ ತಟ್ಟೆ, ಬಟ್ಟಲುಗಳನ್ನು ನೆಕ್ಕುತ್ತಾರೆ. ವೀಡಿಯೋ ಇಲ್ಲಿದೆ ನೋಡಿ,

error: Content is protected !!