fbpx

ಕೊರೋನ ವೈರಸ್ ಹರಡಿ, ಎಲ್ಲರನ್ನೂ ಕೊಲ್ಲಿ ಎಂದ ಮುಜೀಬ್ ನನ್ನು ಕೆಲಸದಿಂದ ಕಿತ್ತೊಗೆದ ಇನ್ಪೋಸಿಸ್, ಇಲ್ಲಿದೆ ಡಿಟೈಲ್ಸ್

ಜನರೆಲ್ಲರೂ ಹೊರಗೆ ಹೋಗಿ ಸೀನಿ, ಎಲ್ಲರಿಗೂ ವೈರಸ್ ಹರಡಿ ಎಂದು ಪೋಸ್ಟ್‌ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಜೀಬ್ ಎಂಬಾತ ನಗರದ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು 25 ವರ್ಷದಿಂದ ಬೆಂಗಳೂರಿನಲ್ಲಿ ಇದ್ದಾನೆ. ಈತ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಎಲ್ಲರಿಗೂ ವೈರಸ್ ಹರಡಿ ಎಂದು ಹೇಳಿ ಬರೆದುಕೊಂಡಿದ್ದನು.

ಇದೀಗ ಆತ ಕೆಲಸ ಮಾಡುತ್ತಿದ್ದ ಸಾಫ್ಟವೇರ್ ಕಂಪನಿ ‘ಇನ್ಫೋಸಿಸ್’ ಆತನನ್ನು ತನ್ನ ಕಂಪನಿಯಿಂದ ಕಿತ್ತೊಗೆದಿದೆ. ಅಷ್ಟೇ ಅಲ್ಲದೆ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆರೋಪಿಯು ತನ್ನ ಫೋಟೊ ಹಾಕಿದ್ದು ಅದರೊಂದಿಗೆ ಜಗತ್ತಿನಾದ್ಯಂತ ವೈರಸ್ ಹರಡಿ, ಜಗತ್ತನ್ನೇ ಮುಗಿಸಿ ಎಂದು ಬರೆದಿದ್ದಾನೆ. ವೀಡಿಯೋ ನೋಡಿ,

error: Content is protected !!