ಕೊರೋನ ಮಹಾಮಾರಿ ವಿಶ್ವದಾದ್ಯಂತ ತನ್ನ ಮರಣ ಮೃದಂಗವನ್ನು ಮುಂದುವರೆಸಿದೆ. ಚೀನಾದಿಂದ ಪ್ರಾರಂಭವಾದ ಸೊಂಕು ನಂತರ ವಿಶ್ವದ ಇತರ ದೇಶಗಳಿಗೂ ಹಬ್ಬಿದ್ದಲ್ಲದೆ, ಅಪಾರ ಸಾವುನೋವುಗಳಿಗೆ ಕಾರಣವಾಗಿದೆ. ಭಾರತದಲ್ಲಿಯೂ 657ಜನರಲ್ಲಿ ಸೋಂಕು ಪತ್ತೆಯಾಗಿದ್ದು 12ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ನಿನ್ನೆ ಒಂದೇ ದಿನ ಈ ಮಹಾಮಾರಿಗೆ ವಿಶ್ವದಾದ್ಯಂತ 2,389 ಮಂದಿ ಬಲಿಯಾಗಿದ್ದಾರೆ ಅಲ್ಲದೆ 48,486 ಮಂದಿಯಲ್ಲಿ ಹೊಸ ಸೋಂಕು ಪತ್ತೆಯಾಗಿದೆ. ಹೀಗೆ ವಿಶ್ವದಾದ್ಯಂತ ಕೊರೋನ ಮಾರಿ ಇದುವರೆಗೆ ಸುಮಾರು 21,283 ಜನರನ್ನು ಬಲಿತೆಗೆದುಕೊಂಡಿದ್ದು, 1,14,218 ಜನ ಗುಣಮುಖರಾಗಿದ್ದಾರೆ. ಇನ್ನೂ 3,35,500 ಜನರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
26 ಮಾರ್ಚ್ 2020, 08:00AM
ಒಟ್ಟು ಕೊರೋನ ಸೋಂಕಿತರು:
471,035
ಒಟ್ಟು ಸಾವು:
21,283
ಒಟ್ಟು ಗುಣಮುಖರಾದವರು:
114,218
ACTIVE CASES
CLOSED CASES
(ದಯವಿಟ್ಟು ಕೇಂದ್ರ ಸರ್ಕಾರ ಹೊರಡಿಸಿರುವ 21ದಿನಗಳ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ)