ದೇಶವನ್ನು ಶತ್ರುಗಳಿಂದ ಕಾಪಾಡೋಕೆ ಸೈನಿಕ, ದೇಶದೊಳಗೆ ಕಾನೂನು ಸುವ್ಯವಸ್ಥೆ ಕಾಪಾಡೋಕೆ ಪೊಲೀಸರು, ಹೀಗೆ ಇಬ್ಬರೂ ಜನಸಾಮಾನ್ಯರಿಗಾಗಿ ಹಗಲಿರುಳು ಕಷ್ಟಪಡುತ್ತಾರೆ. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಪೊಲೀಸ್ ಠಾಣೆಗೆ ನುಗ್ಗಿದ ಜನರ ಗುಂಪೊಂದು ಪೊಲೀಸರನ್ನು ಹಿಗ್ಗಾಮುಗ್ಗಾ ಥಳಿಸಿದೆ.
ಘಟನೆ ನಡೆದಿರೋದು ನವದೆಹಲಿಯ ಆನಂದ್ ವಿಹಾರ್ ಪೊಲೀಸ್ ಠಾಣೆಯಲ್ಲಿ. ಸುಮಾರು 10-12 ಜನರ ಗುಂಪು ಏಕಾಏಕಿ ಪೊಲೀಸ್ ಠಾಣೆಯೊಳಗೆ ನುಗ್ಗಿ ಹೆಡ್ ಕಾನ್ಸ್‌ಟೇಬಲ್ ಒಬ್ಬರನ್ನು ಸುತ್ತುವರೆದು ಹಲ್ಲೆ ಮಾಡಿದೆ. ಇದನ್ನು ಅಲ್ಲೇ ಇದ್ದ ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಹಲ್ಲೆಗೊಳಗಾಗುತ್ತಿರುವ ಪೊಲೀಸ್ ರಕ್ಷಣೆಗೆ ಯಾರೂ ಮುಂದು ಬಂದಿಲ್ಲ.
ಯಾಕೆ ಹೆಡ್‌ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಆಗಸ್ಟ್ 3ರಂದು ನಡೆದಿದೆ ಎಂದು ತಿಳಿದುಬಂದಿದ್ದು, ಪೊಲೀಸ್ ಕಾನ್‌ಸ್ಟೆಬಲ್ ಕ್ಷಮೆ ಕೇಳುತ್ತಲೇ ಇದ್ದರು ಅಲ್ಲಿದ್ದ ಗುಂಪು ಆತನಿಗೆ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಪೊಲೀಸ್ಗೆ ಯಾರು ಥಳಿಸಿದರು ಎಂದು ಪತ್ತೆಯಾಗಿಲ್ಲ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ ಎಂದು ತಿಳಿದುಬಂದಿದೆ.
Viral video shows constable beaten by mob inside police station
Read @ANI Story | https://t.co/EkO8exGsQ1#DelhiCopBeaten #DelhiPolice #Delhi #CopBeaten pic.twitter.com/cIRqkUCkfa
— ANI Digital (@ani_digital) August 6, 2022