ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಬಿಗ್ ಬಾಸ್’ ಕಾರ್ಯಕ್ರಮ ಲಾಂಚ್ ಆಗೋದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳು ಯಾರ್ಯಾರು ಅನ್ನೋದನ್ನು ಜನಪ್ರಿಯ OTT ಆ್ಯಪ್ ವೂಟ್ ಮುಖಾಂತರ ರಿವೀಲ್ ಮಾಡಲಾಗುತ್ತಿದೆ.
‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದ ಮೊದಲನೇ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಎಂಟ್ರಿಕೊಟ್ಟರೆ, ಎರಡನೇ ಸ್ಪರ್ಧಿಯಾಗಿ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಸೋನು ಶ್ರೀನಿವಾಸ್ ಗೌಡ ಎಂಟ್ರಿಕೊಟ್ಟಿದ್ದಾರೆ.
ಟಿಕ್‌ಟಾಕ್, ಇನ್ಸ್ಟಾಗ್ರಾಂ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದವರು ಸೋನು ಶ್ರೀನಿವಾಸ್ ಗೌಡ. ಇದೀಗ ವೂಟ್ ಆಪ್‌ನಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.