ಸೌಂದರ್ಯ ಸ್ಪರ್ಧೆಯ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ರಾಂಪ್ ವಾಕ್ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಸೆಂಬನಾರ್ಕೋವಿಲ್ ಎಂಬಲ್ಲಿ ಕಳೆದ ರವಿವಾರ ಖಾಸಗಿ ಸಂಸ್ಥೆಯೊಂದು ಸೌಂದರ್ಯ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು. ಇಲ್ಲಿ ಭದ್ರತೆಗೆ ನಿಯೋಜಿಸಿದ್ದ ಐವರು ಪೊಲೀಸರು ಯೂನಿಫಾರಂ ಧರಿಸಿಯೇ ರಾಂಪ್ ಮೇಲೆ ಹೆಜ್ಜೆ ಹಾಕಿದ್ದರು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಾಂಪ್ ವಾಕ್ ಮಾಡಿದ ವಿಶೇಷ ಸಹಾಯಕ ಪೊಲೀಸ್ ನಿರೀಕ್ಷಕ ಸೇರಿ ಐದು ಮಂದಿ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ನಾಗಪಟ್ಟಣಂ ಪೊಲೀಸ್ ವರಿಷ್ಠಾಧಿಕಾರಿ ಜವಗರ್ ಅವರು ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ವಿಶೇಷ ಸಹಾಯಕ ಇನ್ಸ್‌ಪೆಕ್ಟರ್ ಸುಬ್ರಮಣಿಯನ್ ಸೇರಿದಂತೆ ರೇಣುಕಾ, ಅಶ್ವಿನಿ, ನಿತ್ಯಶೀಲಾ ಮತ್ತು ಶಿವನೇಸನ್ ವರ್ಗಾವಣೆಯಾದ ಪೊಲೀಸರು.
