ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು, ಫುಟ್‌ಪಾತ್‌ಗಳು ಅಲ್ಲಲ್ಲಿ ಕುಸಿಯೋದನ್ನ ನಾವು ನೋಡಿರುತ್ತೇವೆ. ಈ ಸಂದರ್ಭದಲ್ಲಿ ಅನೇಕರು ಗಾಯಗೊಂಡಿರೋದು ಅಥವಾ ಸಾವಿಗೀಡಾಗಿರೋದು ಇದೆ.
ಇಂತಹದ್ದೇ ಮೈಜುಮ್ ಎನ್ನುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫುಟ್‌ಪಾತ್‌ನಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರಬೇಕಾದರೆ ಏಕಾಏಕಿ ಫುಟ್‌ಪಾತ್ ಕುಸಿಯೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ.
ವ್ಯಕ್ತಿ ಫುಟ್‌ಪಾತ್ ದಾಟಿ ಅಂಗಡಿಯೊಂದರ ಕಡೆ ಹೋಗುತ್ತಿದ್ದಂತೆ ಫುಟ್‌ಪಾತ್‌ನಲ್ಲಿ ಬಿರುಕು ಕಾಣಿಸಿಕೊಂಡು ಕುಸಿದು ಬಿದ್ದಿದೆ. ವ್ಯಕ್ತಿ ಕೆಲವೇ ಸೆಕೆಂಡುಗಳ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
