ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ಜನಪ್ರಿಯರಾಗಿರುವ ಚಿಕ್ಕಮಗಳೂರು ಮೂಲದ ಕಾಫಿನಾಡು ಚಂದು ಅವರು ಜೆಡಿಎಸ್ ಯುವನಾಯಕ ಪ್ರಜ್ವಲ್ ರೇವಣ್ಣ ಅವರಿಗೆ ತಮ್ಮದೇ ಆದ ಶೈಲಿಯಲ್ಲಿ ಬರ್ತ್ಡೇ ವಿಶ್ ಮಾಡಿದ್ದಾರೆ.
ಕಾಫಿನಾಡು ಚಂದು ಅವರು ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿಶ್ ಮಾಡಿದ್ದು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರಿಗೂ ಅವರ ಅಭಿಮಾನಿಗಳ ಜೊತೆ ಸೇರಿ ವಿಶ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಜ್ವಲಣ್ಣ ಪ್ರಜ್ವಲಣ್ಣ ಯ್ಯಾಫ್ಪೀ ಬರ್ತುಡೇ ಎನ್ನುತ್ತಾ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಲ್ಲದೆ, ಅವರಿಗೆ ಓಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಯಾವ ರೀತಿ ವಿಶ್ ಮಾಡಿದ್ದಾರೆ ಅಂತ ನೀವೂ ಕೇಳಿಸಿಕೊಳ್ಳಿ.