ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಲಿದ್ದು, ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಬಾರಿ ಬಿಗ್‌ಬಾಸ್‌ನಲ್ಲಿ ಭಾಗವಹಿಸಬಹುದಾದ ಸಾಕಷ್ಟು ನಟ-ನಟಿಯರ, ಸೋಷಿಯಲ್ ಮೀಡಿಯಾ ಸ್ಟಾರ್‌ಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ನವ್ಯಶ್ರೀ ಹೆಸರು ಕೂಡ ಹರಿದಾಡುತ್ತಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕಿ ನವ್ಯಶ್ರೀ ರಾವ್ ಅವರಲ್ಲಿ ಮಾಧ್ಯಮಗಳು ಕೇಳಿದಾಗ, ಬಿಗ್ ಬಾಸ್ ಶೋನಿಂದ ಕರೆ ಬಂದರೆ ನಾನು ಯಾಕೆ ಬಿಗ್ ಬಾಸ್‌ಗೆ ಹೋಗಬಾರದು ಎಂದು ನವ್ಯಶ್ರೀ ಪ್ರಶ್ನಿಸಿದ್ದಾರೆ. ಕಾಂಟ್ರವರ್ಸಿಗಳಿಗೆ ಒಳಗಾದ ಅದೆಷ್ಟೋ ಜನ ಬಿಗ್ ಬಾಸ್‌ಗೆ ಹೋಗಿದ್ದಾರೆ. ತಾವು ಎನೆಂಬುದು ಪ್ರೂವ್ ಕೂಡ ಮಾಡಿದ್ದಾರೆ. ಅದೇ ರೀತಿ ನಾನು ಬಿಗ್‌ಬಾಸ್‌ಗೆ ಹೋದರೆ ನನ್ನ ಪ್ರತಿಭೆ, ನಿಜವಾದ ವ್ಯಕ್ತಿತ್ವ ಎನು ಎಂಬುದನ್ನು ತಿಳಿಯಬಹುದು.
ಒಂದು ವೇಳೆ ಬಿಗ್ ಬಾಸ್ ಅವಕಾಶ ಕೊಟ್ಟರೆ ಯಾಕೆ ಹೋಗಬಾರದು ಎಂದು ನವ್ಯಶ್ರೀ ಪ್ರಶ್ನಿಸಿದ್ದಾರೆ. ಅಲ್ಲದೆ ತನಗೆ ಸಂಬಂಧಿಸಿದ ದಾಖಲೆ ಆ ವಾಹಿನಿಯ ಕಛೇರಿಗೆ ಹೋಗಿವೆ. ಕೆಲವು ಚರ್ಚೆ ಆಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.