ಸೆಲ್ಫೀ ಕ್ರೇಜ್‌ಗೆ ಸ್ಟಂಟ್ ಮಾಡಲು ಹೋಗಿ ವರ್ಷಂಪ್ರತಿ ಅದೆಷ್ಟೋ ಜನ ಪ್ರಾಣಕಳೆದುಕೊಳ್ಳುತ್ತಾರೆ. ಇದೀಗ ಯುವಕನೊಬ್ಬ ಸೆಲ್ಪೀ ಹುಚ್ಚಿಗೆ ಸ್ನೇಹಿತರ ಕಣ್ಣಿದುರೇ ಪ್ರಾಣ ಕಳೆದುಕೊಂಡಿರುವ ಘಟನೆ ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ನಡೆದಿದೆ.
26 ವರ್ಷದ ಯುವಕ ಜಲಪಾತದ ಬಂಡೆ ಮೇಲೆ ಸಾಹಸ ಮಾಡಲು ಹೋಗಿ ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ. ಈ ಘಟನೆ ಆಗಸ್ಟ್ 3ರಂದು ನಡೆದಿದ್ದು, ದುರ್ಘಟನೆಯು ಅಲ್ಲೇ ವಿಡಿಯೋ ಮಾಡುತ್ತಿದ್ದ ಗೆಳೆಯನ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೃತ ವ್ಯಕ್ತಿಯನ್ನು ಕರೈಕುಡಿ ಮೂಲದ ಅಜಯ್ ಪಾಂಡಿಯನ್ ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತರ ಜೊತೆ ಕೊಡೈಕೆನಾಲ್‌ನ ಪುಲ್ಲವೇಲಿಗೆ ಪ್ರವಾಸ ಕೈಗೊಂಡಿದ್ದ. ಮೃತ ಯುವಕ ತನ್ನ ಗೆಳೆಯನ ಬಳಿ ಪೋಟೋ ತೆಗೆಯಲು ಹೇಳಿ ಬಂಡೆ ಅಂಚಿನತ್ತ ತೆರಳಿದ್ದಾನೆ.
ತನ್ನ ಪೋಟೋದಲ್ಲಿ ಜಲಪಾತ ಕಾಣಿಸುವಂತೆ ಪೋಟೋ ತೆಗೆಸಿಕೊಳ್ಳಲು ಮುಂದಾಗುತ್ತಿದ್ದಂತೆ ಏಕಾಏಕಿ ಜಾರಿ ಜಲಪಾತಕ್ಕೆ ಉರುಳಿದ್ದಾನೆ. ಕೆಲವೇ ಸೆಕೆಂಡುಗಳಲ್ಲಿ ಯುವಕ ಜಲಪಾತಕ್ಕೆ ಆಹುತಿಯಾಗಿದ್ದಾನೆ.
ಮಾಹಿತಿ ತಿಳಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ಪತ್ತೆ ಕಾರ್ಯಾಚರಣೆ ಆರಂಭಿಸಿದರೂ, ಕಾಣೆಯಾದ ಯುವಕನನ್ನು ಹುಡುಕುವುದು ಸಾಧ್ಯವಾಗಲಿಲ್ಲ. ಈ ಜಲಪಾತ ಅತ್ಯಂತ ಅಪಾಯಕಾರಿಯಾಗಿದ್ದು, ಕಳೆದ ಕೆಲವು ವರ್ಷಗಳಲ್ಲೇ ಇಲ್ಲಿ ಐದಕ್ಕೂ ಹೆಚ್ಚು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಯುವಕನ ಕೊನೆ ಕ್ಷಣದ ವಿಡಿಯೋ;
तामिळनाडूतील कोडाईकनलमध्ये फोटो काढण्याच्या नादात एक तरुण धबधब्यात पडला. त्याच्या मित्राने या घटनेचा व्हिडीओ रेकॉर्ड केलाय. ही घटना ३ ऑगस्टला घडली असून तरुणाचा शोध सुरू आहे.https://t.co/2jrmCKw8Ui #India #TamilNadu #Waterfall #Video #ViralVideo pic.twitter.com/zDoKwOkJfL
— LoksattaLive (@LoksattaLive) August 5, 2022