ಮಕ್ಕಳೆಂದರೆ ಹೆತ್ತವರಿಗೆ ಸರ್ವಸ್ವ, ಆದರೆ ಇಲ್ಲೊಬ್ಬ ಪಾಪಿ ತಾಯಿ ತನ್ನದೇ ಕರುಳಕುಡಿಯನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆಗೈಯುವ ಮೂಲಕ ರಾಕ್ಷಸೀ ಬುದ್ದಿ ತೋರಿಸಿದ್ದಾಳೆ. ಘಟನೆ ನಡೆದಿರುವುದು ಬೆಂಗಳೂರಿನ ಸಂಪಂಗಿ ರಾಮನಗರದ ಅದಿತ್ವ ಅಪಾಟ್ರ್ಮೆಂಟ್ ನಲ್ಲಿ.
ತಾಯಿಯಿಂದಲೇ ಹತ್ಯೆಗೀಡಾದ ಮಗುವನ್ನು ಜೀತಿ ಎಂದು ಗುರುತಿಸಲಾಗಿದ್ದು, ತಾಯಿ ತನ್ನ ಮಗಳನ್ನು ಎಸೆಯುತ್ತಿರುವ ಭೀಕರ ದೃಷ್ಯ ಅಪಾರ್ಟ್‌ಮೆಂಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದೀಗ ಈ ಭಯಾನಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸ್ವಂತ ಮಗುವನ್ನೇ ಹತ್ಯೆಗೈದ ಪಾಪಿ ತಾಯಿಯ ಅಮಾನವೀಯ ಕೃತ್ಯಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.
ಆರೋಪಿಯನ್ನು ಸುಷ್ಮಾ ಎಂದು ಗುರುತಿಸಲಾಗಿದ್ದು, ಮಗು ಬುದ್ಧಿಮಾಂದ್ಯತೆಯಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ. ಇದರಿಂದ ರೋಸಿ ಹೋಗಿದ್ದ ಸುಷ್ಮಾ ಮಗುವನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.
ಮೊದಲಿಗೆ ತನ್ನ ಬುದ್ದಿಮಾಂದ್ಯ ಮಗುವನ್ನು ನಾಲ್ಕನೇ ಮಹಡಿಯಿಂದ ಎಸಿದಿದ್ದು, ಬಳಿಕ ತಾನೂ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಅಕ್ಕಪಕ್ಕದ ಮನೆಯವರು ಬಂದು ಆಕೆಯನು ರಕ್ಷಣೆ ಮಾಡಿದ್ದಾರೆ. ಆದರೆ ಮೇಲಿಂದ ಬಿದ್ದ ರಭಸಕ್ಕೆ ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ.
ಆರೋಪಿಯು ದಂತ ವೈದ್ಯೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದು, ಪತಿ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಮಗುವನ್ನು ರೈಲ್ವೇ ಸ್ಟೇಷನ್‌ನಲ್ಲಿ ಬಿಟ್ಟು ಬಂದಿದ್ದಳು, ಆದರೆ ಆಕೆಯ ಪತಿ ಮಗುವನ್ನು ಹುಡುಕಿ ವಾಪಾಸ್ ಕರೆದುಕೊಂಡು ಬಂದಿದ್ದರು.
ಸದ್ಯ ಪ್ರಕರಣ ಸಂಬಂಧ ತಾಯಿ ಸುಷ್ಮಾ ವಿರುದ್ದ ಸಂಪಂಗಿ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಾಕಿಂಗ್ ವಿಡಿಯೋ :
Shocking 📹
Karnataka: Mother throws her own child to death from 5th floor of her apartment at SR Nagar Bengaluru and than sat on raling till residents pulled her down. pic.twitter.com/EQ0FzAsdSc
— R K sahu 🚩🚩KRT Team (@RohitSa1110) August 5, 2022