fbpx

Please assign a menu to the primary menu location under menu

ರೈತ ಪ್ರತಿಭಟನೆಯಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ ರಾಕೇಶ್ ಟಿಕಾಯತ್‌ನನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿದ ನೆಟ್ಟಿಗರು! ವೈರಲ್ ವಿಡಿಯೋ ನೋಡಿ

ಭಾನುವಾರ ಮುಜಪ್ಫರ್‌ನಗರದಲ್ಲಿ ರೈತ ಸಂಘಟನೆಗಳು ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು. ದೇಶದ ವಿವಿದೆಡೆಗಳಿಂದ ಸಾವಿರಾರು ರೈತರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾಗಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ಹೇಳಿಕೊಂಡಿದೆ.

ಉತ್ತರ ಪ್ರದೇಶದಲ್ಲಿ ಇನ್ನೇನು ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಈ ಪ್ರತಿಭಟನೆ ನಡೆಸಿರೋದು ಇದರ ಹಿಂದಿರುವ ರಾಜಕೀಯ ಕುಮ್ಮಕ್ಕನ್ನು ಸೂಚಿಸುತ್ತದೆ ಎಂದು ಬಿಜೆಪಿ ಹೇಳಿದೆ. ಪ್ರತಿಭಟನೆಯಲ್ಲಿ ಸೇರಿದ್ದ ರೈತ ಸಂಘಟನೆ ನಾಯಕರು ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳನ್ನು ಕೆಳಗಿಳಿಸುವುದಾಗಿ ಶಪಥ ಮಾಡಿರೋದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅದು ಈ ಸಂದರ್ಭದಲ್ಲಿ ಹೇಳಿದೆ.


ಈ ಹಿಂದೆ ಕೃಷಿ ಕಾನೂನುಗಳಿಗೆ ತಿದ್ದುಪಡಿ ಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದ ರೈತ ನಾಯಕರೇ ಈಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರೋದು ಬಾರೀ ಆಕ್ರೋಶಕ್ಕೆ ಕಾರಣವಾಗಿದೆ‌. ಈ ಹಿಂದೆ ಕೇಂದ್ರ ಸರ್ಕಾರ ಕೃಷಿ ಕಾನೂನು ಕರಡು ಪ್ರತಿ ಸಿದ್ದಪಡಿಸಿದಾಗ, ರಾಕೆಶ್ ಟಿಕಾಯತ್ ನೇತೃತ್ವದ ‘ಭಾರತೀಯ ಕಿಸಾನ್ ಯೂನಿಯನ್’ ಕೃಷಿ ಕಾನೂನುಗಳನ್ನು ಬೆಂಬಲಿಸಿ ಹೇಳಿಕೆ ಬಿಡುಗಡೆ ಮಾಡಿತ್ತಲ್ಲದೆ, ಎಲ್ಲರೂ ಪಕ್ಷಬೇದ ಮರೆತು ಇದನ್ನ ಬೆಂಬಲಿಬೇಕು ಎಂದು ಘೋಷಿಸಿತ್ತು.

ಆದರೆ ಯಾವಾಗ ವಿರೋಧ ಪಕ್ಷಗಳು ಹಾಗೂ ಅವುಗಳ ಬೆಂಬಲಿತ ರೈತ ಸಂಘಟನೆಗಳು ಕೃಷಿ ಕಾನೂನಿನ ವಿರುದ್ಧ ನಿಂತರೋ ರಾಕೇಶ್ ಟಿಕಾಯತ್ ಕೂಡ ಯೂಟರ್ನ್ ಹೊಡೆದುಕೊಂಡು ಕೃಷಿ ಕಾನೂನು ವಿರೋಧಿಸಲು ಶುರು ಮಾಡಿದ. ಯಾವಾಗ ಪ್ರತಿಭಟನೆ ನಿರತರಲ್ಲಿ ಖಾಲಿಸ್ತಾನಿ ಉಗ್ರರು, ಪಾಕಿಸ್ತಾನಿ ಐಎಸ್‌ಐ ಬೆಂಬಲಿತ ನಕಲಿ ರೈತರು ಕಾಣಿಸಿಕೊಂಡರೋ ಆವಾಗಲೇ ಕೇಂದ್ರ ಸರ್ಕಾರ ರೈತ ಪ್ರತಿಭಟನೆಯನ್ನು ನಿರ್ಲಕ್ಷಿಬಿಟ್ಟಿತು. ಇದರಿಂದ ಪ್ರತಿಭಟನಾ ನಿರತರಿಗೆ ಮುಖಭಂಗವಾಯಿತು.

ಇದೀಗ ಉತ್ತರಪ್ರದೇಶ, ಗೋವಾ, ಮನಿಪುರ, ಉತ್ತರಖಂಡ ಹಾಗೂ ಪಂಜಾಬ್ ಚುನಾವಣೆ ಶುರುವಾಗೋ ಹೊತ್ತಲ್ಲೇ ರೈತಪ್ರತಿಭಟನೆ ಮತ್ತೆ ಕಾವು ಪಡೆದುಕೊಂಡಿದೆ. ಪಂಜಾಬ್ ಹೊರತು ಪಡಿಸಿ ಉಳಿದ ನಾಲ್ಕು ರಾಜ್ಯ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಈಗಾಗಲೇ ಚುನಾವಣೆ ಸಮೀಕ್ಷೆಗಳು ತಿಳಿಸುತ್ತಿವೆ. ಇದು ವಿರೋಧ ಪಕ್ಷಗಳಿಗೆ ಇರುಸುಮುರುಸು ಉಂಟು ಮಾಡಿದೆ.

ಎಲ್ಲೆಲ್ಲಾ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಿದೆಯೋ ಅಲ್ಲೆಲ್ಲಾ ರೈತ ಪ್ರತಿಭಟನೆ ಹೆಸರಲ್ಲಿ ಗಲಭೆ ಎಬ್ಬಿಸುವ ಹುನ್ನಾರ ನಡೆದಿದೆ. ಈ ಹುನ್ನಾರದ ಪ್ರಾರಂಭಿಕ ಹಂತವೇ ಮುಜಫ್ಪರಾಬಾದ್ ಸಮಾವೇಶ ಎಂದು ಬಿಜೆಪಿ ಹೇಳಿಕೊಂಡಿದೆ. ಇದೇ ಸಮಾವೇಶದಲ್ಲಿ ರಾಕೇಶ್ ಟಿಕಾಯತ್ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ.


ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನೆಟ್ಟಿಗರು ರಾಕೇಶ್ ಟಿಕಾಯತ್‌ನನ್ನು ತಾಲಿಬಾನ್ ಉಗ್ರರಿಗೆ ಹೋಲಿಕೆ ಮಾಡಿದ್ದಾರೆ. ತಾಲಿಬಾನ್ ಉಗ್ರರು ಅಮಾಯಕರ ರಕ್ತಪಾತ ನಡೆಸಿದ ಬಳಿಕ ‘ಅಲ್ಲಾಹು ಅಕ್ಬರ್’ ಕೂಗುವ ವಿಡಿಯೋವನ್ನು ಟಿಕಾಯತ್ ವಿಡಿಯೋ ಜೊತೆ ಜೋಡಿಸಿ ಹಂಚಿಕೊಂಡಿದ್ದಾರೆ. ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಹಾಗೂ ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ನಕಲಿ ರೈತನಾಯಕರು ಇಬ್ಬರೂ ಒಂದೇ ಎಂಬ ಅರ್ಥದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ಅಚ್ಚರಿಯ ವಿಷಯ ಅಂದ್ರೆ, 2013ರಲ್ಲಿ ಇದೇ ಮುಜಫ್ಫರ್‌ ನಗರದಲ್ಲಿ ಹಿಂದೂ ಹಾಗೂ ಮುಸ್ಲಿಮರ ನಡುವೆ ನಡೆದ ಕೋಮುಗಲಭೆ ಉಂಟಾಗಿದ್ದು ರಾಕೇಶ್ ಟಿಕಾಯತ್ ನಡೆಸಿದ ಕೋಮು ಪ್ರಚೋದಿತ ಭಾಷಣದಿಂದ ಎಂದು ಆತ ಹಾಗೂ ಆತನ ಸಹೋದರನ ಮೇಲೆ ಪ್ರಕರಣ ದಾಖಲಾಗಿದೆ. ಹಿಂದೂ ಜಾಟರು ಹಾಗೂ ಮುಸ್ಲಿಂ ಸಮುದಾಯ ನಡುವೆ ಒಡಕು ಮೂಡಿಸಿದ ಪರಿಣಾಮ ಈ ಕೋಮುಗಲಭೆ ನಡೆದಿತ್ತು. ಈ ಗಲಭೆಯಲ್ಲಿ 60ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ಇದೀಗ ಅದೇ ಮುಸ್ಲಿಂ ಸಮುದಾಯವನ್ನು ಓಲೈಸಲು ರಾಕೆಶ್ ಟಿಕಾಯತ್ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ್ದಾನೆ ಎಂದು ಹೇಳಲಾಗುತ್ತಿದೆ.

Watch Video

error: Content is protected !!