fbpx

Please assign a menu to the primary menu location under menu

ಅಪರೂಪವೆಂಬಂತೆ ಅವಳಿ ಮರಿಗಳಿಗೆ ಜನ್ಮ ನೀಡಿದ ತಾಯಿ ಆನೆಯ ಸಂಭ್ರಮಾಚರಣೆ ಹೇಗಿದೆ ನೋಡಿ! ವೈರಲ್ ವಿಡಿಯೋ

ಶ್ರೀಲಂಕಾದಲ್ಲಿ ಆನೆಯೊಂದು ಸುಮಾರು 80 ವರ್ಷಗಳಲ್ಲಿ ಮೊದಲ ಬಾರಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದೆ ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ. 25 ವರ್ಷದ ಸುರಂಗಿ ಹೆಸರಿನ ಆನೆ ಅವಳಿ ಗಂಡು ಮರಿಗಳಿಗೆ ಜನ್ಮ ನೀಡಿದೆ.

ದೇಶದ ಮಧ್ಯ ಬೆಟ್ಟದಲ್ಲಿರುವ ಪಿನ್ನವಾಲಾ ಅನಾಥ ಆನೆಗಳ ಆಶ್ರಮದಲ್ಲಿ ಅವಳಿ ಮರಿಗಳು ಜನಿಸಿದೆ ಎಂದು ಅನಾಥಾಶ್ರಮದ ವಕ್ತಾರರು ತಿಳಿಸಿದ್ದಾರೆ. ಈ ಅವಳಿ ಮರಿಗಳ ತಂದೆ, 17 ವರ್ಷದ ಪಾಂಡು ಹೆಸರಿನ ಆನೆ ಕೂಡ ಇದೇ ಅನಾಥಾಶ್ರಮ ನಿವಾಸಿ.

“ಮರಿಗಳು ಮತ್ತು ತಾಯಿ ಆನೆ ಎಲ್ಲರೂ ಆರೋಗ್ಯವಾಗಿದ್ದಾರೆ. ಶಿಶುಗಳು ತುಲನಾತ್ಮಕವಾಗಿ ಚಿಕ್ಕದಾಗಿದೆ, ಆದರೆ ಅವು ಆರೋಗ್ಯವಾಗಿವೆ “ಎಂದು ಪಿನ್ನವಾಲಾ ಆನೆ ಅನಾಥಾಶ್ರಮದ ಮುಖ್ಯಸ್ಥೆ ರೇಣುಕಾ ಬಂಡರನಾಯ್ಕೆ ‘ಬಿಬಿಸಿ’ಸುದ್ದಿ ಸಂಸ್ಥೆಗೆ ತಿಳಿಸಿದರು.

ಶ್ರೀಲಂಕಾದ ಆನೆ ತಜ್ಞರು ದೇಶದಲ್ಲಿ ಸಾಕು ಆನೆಗೆ ಕೊನೆಯದಾಗಿ ಅವಳಿಗಳು ಜನಿಸಿರೋದು 1941 ರಲ್ಲಿ ಎಂದು ಹೇಳಿದ್ದಾರೆ. ಅವಳಿ ಮರಿ ಆನೆಗಳು ತಾಯಿಯ ಜೊತೆ ಇರುವ ವಿಡಿಯೋವನ್ನು ಇಲ್ಲಿ ಕಾಣಬಹುದಾಗಿದೆ.

Watch Video

error: Content is protected !!