fbpx

Please assign a menu to the primary menu location under menu

ಹುಂಜಕ್ಕೆ ಕಾಟಕೊಡಲು ಹೋಗಿ ಪೇಚಿಗೆ ಸಿಲುಕಿದ ಯುವಕ! ವೈರಲ್ ವಿಡಿಯೋ ನೋಡಿ

ಪ್ರಾಣಿ-ಪಕ್ಷಿಗಳು ಸಾಮಾನ್ಯವಾಗಿ ಮನುಷ್ಯನ ಮೇಲೆ ದಾಳಿ ಮಾಡಲ್ಲ, ತಮಗೆ ಮನುಷ್ಯ ಪ್ರಾಣಿಯಿಂದ ತೊಂದರೆ ಎದುರಾದಾಗ ಮಾತ್ರ ಅವುಗಳು ದಾಳಿ ಮಾಡೋದು. ಅದರಲ್ಲೂ ಸಾಕು ಪ್ರಾಣಿಗಳಂತೂ ಮನುಷ್ಯನ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತವೆ.

ಮನುಷ್ಯ ಪ್ರಾಣಿಯಂತೂ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳನ್ನು ಆಟವಾಡಿಸೋದು, ಕಾಟ ಕೊಡೋದು ಮಾಡುತ್ತಿರುತ್ತಾನೆ. ಇದೇ ರೀತಿ ಯುವಕನೊಬ್ಬ ಹುಂಜವೊಂದಕ್ಕೆ ಕಾಟ ಕೊಡಲು ಹೋಗಿ ಪೇಚಿಗೆ ಸಿಲುಕಿದ್ದಾನೆ.

ತನ್ನ ಪಾಡಿಗೆ ತಾನಿದ್ದ ಹುಂಜಕ್ಕೆ ಯುವಕ ಕೀಟಲೆ ಕೊಡಲು ಹೋಗಿದ್ದಾನೆ, ಕೋಲು ಹಿಡಿದುಕೊಂಡು ಅದನ್ನು ಬೆದರಿಸಲು ಯತ್ನಿಸಿದ್ದಾನೆ. ಯುವಕನ ಕೀಟಲೆಯನ್ನು ಸಾಕಷ್ಟು ಸಹಿಸಿಕೊಂಡ ಹುಂಜ ಕೊನೆಗೆ ಯುವಕನ ಮೇಲೆ ತಿರುಗಿ ಬಿದ್ದಿದೆ. ತನ್ನನ್ನು ಬೆದರಿಸಲು ಯತ್ನಿಸಿದ ಯುವಕನ ಮೇಲೆ ಮುಗಿಬಿದ್ದು ಅಟ್ಟಿಸಿಕೊಂಡು ಹೋಗಿದೆ.

ಹುಂಜ ಏಕಾಏಕಿ ದಾಳಿ ಮಾಡುತ್ತಿದ್ದಂತೆ ಯುವಕ ಚೀರಾಡಿಕೊಂಡು ಓಡಿಹೊಗಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಅತಿಯಾಗಿ ಕಾಡಿಸಿದರೆ ಯಾರೂ ಸುಮ್ಮನಿರುವುದಿಲ್ಲ ಎಂಬುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆ.

Watch Video

error: Content is protected !!