fbpx

Please assign a menu to the primary menu location under menu

ಅಫ್ಘಾನಿಸ್ತಾನದ ಪಂಚಶೀರ್ ಪ್ರಾಂತ್ಯವೂ ತಾಲಿಬಾನ್ ಉಗ್ರರ ವಶವಾಯಿತೇ? ವಿಡಿಯೋ ವೈರಲ್

ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಮತ್ತು ಪಂಚಶೀರ್ ಯೋಧರ ನಡುವಿನ ಹೋರಾಟ ಜಾರಿಯಲ್ಲಿದೆ. ಅಮೆರಿಕಾ ಸೇನೆ ಅಪ್ಘಾನ್‌ನಿಂದ ತೆರಳುತ್ತಿದ್ದಂತೆ ಅನಿರೀಕ್ಷಿತ ವೇಗದಲ್ಲಿ ಕಾಬೂಲ್ ನ್ನು ವಶಕ್ಕೆ ಪಡೆದಿದ್ದ ತಾಲಿಬಾನ್ ಉಗ್ರರಿಗೆ ಪಂಚಶೀರ್ ಕಣಿವೆ ಮಾತ್ರ ದುಸ್ವಪ್ನವಾಗಿದೆ ಕಾಡಿದೆ.

ಈ ಪ್ರಾಂತ್ಯವನ್ನು ವಶಪಡಿಸಿಕೊಂಡು ಸಂಪೂರ್ಣ ಅಫ್ಘಾನಿಸ್ಥಾನದಲ್ಲಿ ಅಧಿಕಾರ ಸ್ಥಾಪಿಸಲು ತಾಲಿಬಾನ್ ಹರಸಾಹಸ ಪಡುತ್ತಿದೆ. ಪಂಚಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಎನ್ಆರ್‌ಎಫ್ ಪ್ರತಿರೋಧ ಪಡೆಯ ವಿರುದ್ಧ ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿದೆ. ಅಹ್ಮದ್ ಮಸೌದ್ ನೇತೃತ್ವದಲ್ಲಿ ಅಫ್ಘಾನಿಸ್ತಾನ ರಾಷ್ಟ್ರೀಯ ಪ್ರತಿರೋಧ ಪಡೆ ತಾಲಿಬಾನ್ ಉಗ್ರರ ವಿರುದ್ದ ಹೋರಾಟ ನಡೆಸುತ್ತಿದೆ.

ಕಳೆದ ಶುಕ್ರವಾರ ತಾಲಿಬಾನ್ ‘ತಾವು ಪಂಚಶೀರ್ ಪ್ರಾಂತ್ಯದ ಮೇಲೆ ಅಧಿಪತ್ಯ ಸಾಧಿಸಿದ್ದೇವೆ, ಸಂಪೂರ್ಣ ಅಫ್ಘಾನ್ ನಮ್ಮ ವಶವಾಗಿದೆ’ ಎಂದು ಹೇಳಿಕೊಂಡಿತ್ತು. ಆದರೆ ಇದನ್ನು ಅಹ್ಮದ್ ಮಸೌದ್ ಮಾತ್ರ ಇದನ್ನು ನಿರಾಕರಿಸಿದ್ದರು. ಆದರೆ ಇದೀಗ ಬಂದ ಮಾಹಿತಿ ಪ್ರಕಾರ ಅಪ್ಘಾನಿಸ್ಥಾನದ ಪಂಚಶೀರ್ ಪ್ರಾಂತ್ಯದಲ್ಲಿ ಕೂಡ ತಾಲಿಬಾನ್ ಉಗ್ರರು ಮೇಲುಗೈ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.

ಪಂಜಶೀರ್‌ನ ಬಹುತೇಕ ಎಲ್ಲಾ ಜಿಲ್ಲೆಗಳು ತಮ್ಮ ವಶದಲ್ಲಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಕೂಡ ತಾಲಿಬಾನ್ ಹಂಚಿಕೊಂಡಿದೆ. ತಾಲಿಬಾನ್ ಪಂಜಶೀರ್ ಪ್ರಾಂತ್ಯದ ಏಳು ಜಿಲ್ಲೆಗಳನ್ನೂ ವಶಪಡಿಸಿಕೊಂಡಿದ್ದು ಎನ್‌ಆರ್‌ಎಫ್ ಯೋಧರು ಬೆಟ್ಟಗುಡ್ಡಗಳಲ್ಲಿ ಅವಿತುಕೊಂಡಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪಂಚಶೀರ್ ಹೋರಾಟದಲ್ಲಿ ತಾಲೀಬಾನ್ ಭಯೋತ್ಪಾದಕರಲ್ಲು ಕೂಡ ಸಾಕಷ್ಟು ಸಾವು ನೋವು ಸಂಭವಿಸಿದೆ. ಸುಮಾರು ಸಾವಿರಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು ಅಫ್ಘಾನಿಸ್ತಾನ ರಾಷ್ಟ್ರೀಯ ಪ್ರತಿರೋಧ ಪಡೆಯ ಯೋಧರು ಹೊಡೆದುರುಳಿಸಿದ್ದಾರೆ. ಸಾಕಷ್ಟು ಎನ್‌ಆರ್‌ಎಫ್ ಯೋಧರೂ ತಮ್ಮ ಪ್ರಾಂತ್ಯದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ್ದಾರೆ.

Watch Video

error: Content is protected !!