fbpx

Please assign a menu to the primary menu location under menu

ನೂರಾರು ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದ ಪಂಚಶೀರ್ ಸೈನಿಕರು, ಎಲ್ಲೆಲ್ಲೂ ಉಗ್ರರ ಹೆಣಗಳು! ವೈರಲ್ ವಿಡಿಯೋ ನೋಡಿ

ಅಮೇರಿಕಾ ಹಾಗೂ ನ್ಯಾಟೋ ಪಡೆಗಳು ಅಪ್ಘಾನಿಸ್ತಾನ ತೊರೆದ ನಂತರ ಅಪ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ಬೆಂಬಲಿತ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದೆ. ಅಮೇರಿಕಾ ಸೈನಿಕರು ದೇಶ ತೊರೆಯುತ್ತಿದ್ದಂತೆ ಬೆಟ್ಟ, ಗುಡ್ಡಗಳಲ್ಲಿ ಅಡಗಿಕೊಂಡಿದ್ದ ತಾಲಿಬಾನ್ ಉಗ್ರರು ಹಾಗೂ ಬೆಂಬಲಿಗರು ಇಡೀ ದೇಶವನ್ನು ಆಕ್ರಮಿಸಿಕೊಂಡು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡರೂ ತಾಲಿಬಾನ್ ಉಗ್ರರಿಗೆ ಪಂಚಶೀರ್ ಪ್ರಾಂತ್ಯವನ್ನು ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಪಂಚಶೀರ್‌ನ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಂತ್ಯವನ್ನು ಯಾವುದೇ ಕಾರಣಕ್ಕೂ ಜಿಹಾದಿಗಳ ಕೈಗೆ ಒಪ್ಪಿಸಲು ಸಿದ್ದವಿಲ್ಲದ ಕಾರಣ ಪಂಚಶೀರ್‌ನಲ್ಲಿ ತಾಲಿಬಾನ್ ಉಗ್ರರು ಹಾಗೂ ಎನ್‌ಆರ್‌ಎಫ್(ತಾಲಿಬಾನ್ ಪ್ರತಿರೋಧ ಪಡೆಗಳ) ನಡುವೆ ಯುದ್ದ ಏರ್ಪಟ್ಟಿದೆ.

ಪಂಚಶೀರ್ ಪ್ರಾಂತ್ಯ ನಮ್ಮ ವಶವಾಗಿದೆ ಎಂದು ತಾಲಿಬಾನ್ ಕೆಲದಿನಗಳ ಹಿಂದೆ ಹೇಳಿತ್ತಾದರೂ ಪ್ರತಿರೋಧ ಪಡೆಗಳ ನಾಯಕರು ಇದನ್ನು ಅಲ್ಲಗಳೆದಿದ್ದಾರೆ. ಇದೊಂದು ಪಾಕಿಸ್ತಾನಿ ಐಎಸ್‌ಐ ಪ್ರೇರಿತ ಸುಳ್ಳುಸುದ್ದಿಗಳು, ನಮ್ಮ ಪಂಚಶೀರ್ ಪ್ರಾಂತ್ಯ ಇನ್ನೂ ನಮ್ಮ ಹಿಡಿತದಲ್ಲೇ ಇದೆ, ಎನ್‌ಆರ್‌ಎಫ್ ಸೈನಿಕರು ತಮ್ಮ ಪ್ರಾಣ ಪಣಕ್ಕಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿದೆ.

ಪಂಚಶೀರ್ ಪ್ರಾಂತ್ಯದಲ್ಲಿ ಎನ್‌ಆರ್‌ಎಫ್ ಪಡೆಗಳು ಹಾಗೂ ತಾಲಿಬಾನ್ ಉಗ್ರರ ನಡುವೆ ಬಾರೀ ಹೋರಾಟ ಏರ್ಪಟ್ಟಿದೆ. ಎನ್‌ಆರ್‌ಎಫ್ ಸೈನಿಕರ ದಾಳಿಗೆ ತಾಲಿಬಾನ್ ಉಗ್ರರು ತತ್ತರಿಸಿ ಹೋಗಿದ್ದು, ಸುಮಾರು 800ಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು ಹತ್ಯೆಗೈದಿರುವುದಾಗಿ ಪಂಚಶೀರ್ ಪ್ರಾಂತ್ಯದ ನಾಯಕರು ಹೇಳಿದ್ದಾರೆ.

ಪಂಚಶೀರ್‌ನ ಗುಡ್ಡಗಳಲ್ಲಿ ಎಲ್ಲೆಲ್ಲೂ ತಾಲಿಬಾನ್ ಉಗ್ರರ ಹೆಣಗಳೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಈ ಬಗ್ಗೆ ಪಂಚಶೀರ್ ನಾಯಕರು ವಿಡಿಯೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹತ್ಯೆಯಾದ ಉಗ್ರರಲ್ಲಿ ಅನೇಕರು ಪಾಕಿಸ್ತಾನಿ ಸೇನೆಯವರು ಎಂಬ ಬಗ್ಗೆ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ. ಸುಮಾರು ಸಾವಿರಕ್ಕು ಹೆಚ್ಚು ತಾಲೀಬಾನಿಗಳನ್ನು ಹಿಡಿದು ಅವರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರೋದಾಗಿ ಎನ್‌ಆರ್‌ಎಫ್ ಸೈನಿಕರು ಘೋಷಿಸಿದ್ದಾರೆ.

ತಾಲಿಬಾನ್ ಆಕ್ರಮಣದ ಬಗ್ಗೆ ಪ್ರತಿಕ್ರಿಯಿಸರುವ ತಾಲಿಬಾನ್ ವಿರೋದಿ ಹೋರಾಟಗಾರ ಅಫ್ಘಾನಿಸ್ತಾನದ ನಾರ್ದರ್ನ್ ಅಲೈಯನ್ಸ್ ಕಮಾಂಡರ್ ಹಸಿಬ್, “ನಾವು ನಿಮ್ಮನ್ನು ಕಣಿವೆಗೆ ಪ್ರವೇಶಿಸಲು ಬಿಡುತ್ತೇವೆ ಆದರೆ (ನಿಮ್ಮನ್ನು) ಹೊರಗೆ ಬಿಡುವುದಿಲ್ಲ” ಎಂದು ಹೇಳಿದ್ದಾರೆ. ಎರಡು ಕಡೆ ಅಪಾರ ಸಾವು ನೋವು ಉಂಟಾಗಿರುವ ಬಗ್ಗೆ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

Watch Video

video
error: Content is protected !!