fbpx

Please assign a menu to the primary menu location under menu

ರಾತ್ರಿ ಪಿಪಿಇ ಕಿಟ್ ಧರಿಸಿ ವಾರ್ಡಿಗೆ ಬಂದ ಆಸ್ಪತ್ರೆ ಸಿಬ್ಬಂದಿಯನ್ನು ದೆವ್ವ ಎಂದುಕೊಂಡು ಕಿರುಚಾಡಿದ ಪೇಶೆಂಟ್! ವೈರಲ್ ವಿಡಿಯೋ ನೋಡಿ

ಕರೋನಾ ಸಾಂಕ್ರಾಮಿಕದ ನಂತರ ಪ್ರಪಂಚದಾದ್ಯಂತ ಜನರ ದಿನಚರಿಯೇ ಬದಲಾಗಿ ಹೋಗಿದೆ. ಕರೋನಾ ವೈರಸ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್‌ಗಳ ಮೊರೆ ಹೋಗಬೇಕಾಗಿ ಬಂದಿದೆ.

ಕರೋನಾ ಇದೀಗ ಆಲ್ಫಾ, ಬೀಟಾ, ಡೆಲ್ಟಾ ಹೀಗೆ ವಿವಿಧ ವೇರಿಯೆಂಟ್‌ಗಳಾಗಿ ಜನರನ್ನು ಕಾಡಲು ಶುರು ಮಾಡಿದೆ. ಎಷ್ಟೇ ಎಚ್ಚರಿಕೆ ವಹಿಸಿದ್ರೂ ಕರೋನಾ ಸಾಂಕ್ರಾಮಿಕಕ್ಕೆ ಒಳಗಾಗುತ್ತಿರುವ ಜನರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಇದೀಗ ಕರೋನಾ ಸಾಂಕ್ರಾಮಿಕಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗೋಕೆ ಕಾರಣವೂ ಇದೆ. ಕರೋನಾ ಸೋಂಕಿಗೆ ಒಳಗಾಗಿದ್ದ ರೋಗಿಗಳ ವಾರ್ಡ್‌ಗೆ ರಾತ್ರಿ ಹೊತ್ತು ಪಿಪಿಇ ಕಿಟ್ ಧರಿಸಿದ ಆಸ್ಪತ್ರೆ ಸಿಬ್ಬಂದಿ ಬಂದಿದ್ದು, ಏಕಾಏಕಿ ರಾತ್ರಿ ಕತ್ತಲಲ್ಲಿ ಬಿಳಿ ಬಟ್ಟೆ ಧರಿಸಿದ ಆಕಾರವನ್ನು ನೋಡಿದ ಪೇಶೆಂಟ್ ಒಬ್ಬರು ಬೆಚ್ಚಿಬಿದ್ದಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ರೋಗಿಗಳ ಹೆಲ್ತ್ ಮಾನಿಟರ್ ಮಾಡಲು ವಾರ್ಡ್‌ಗೆ ಬಂದಿದ್ದು, ತಮ್ಮ ಹಾಗೂ ರೋಗಿಗಳ ಸುರಕ್ಷತೆಗಾಗಿ ಪಿಪಿಇ ಕಿಟ್ ಧರಿಸಿದ್ದರು. ಹೀಗೆ ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ರೋಗಿಯೊಬ್ಬರ ಬಳಿ ತೆರಳಿ ಅವರಿಗೆ ಅಳವಡಿಸಿದ್ದ ವೈದ್ಯಕೀಯ ಉಪಕರಣಗಳನ್ನು ಮಾನಿಟರ್ ಮಾಡಬೇಕು ಎನ್ನುವಷ್ಟರಲ್ಲಿ ನಿದ್ದೆಗಣ್ಣಿನಿಂದ ರೋಗಿ ಬಿಳಿ ಬಟ್ಟೆ ತೊಟ್ಟ ಸಿಬ್ಬಂದಿಯನ್ನು ನೋಡಿ ಹೌಹಾರಿ ಹೋಗಿದ್ದಾರೆ.

ತಮ್ಮ ಬಳಿ ನಿಂತಿರೋದು ದೆವ್ವ ಎಂದು ತಿಳಿದುಕೊಂಡು ಬೊಬ್ಬೆ ಹೊಡೆದು ರಂಪಾಟ ಮಾಡಿದ್ದಾರೆ. ಆ ರೋಗಿಯ ಬೊಬ್ಬೆಗೆ ವಾರ್ಡ್‌ನಲ್ಲಿದ್ದ ಇತರ ಪೇಶೆಂಟ್‌ಗಳೂ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಯ ಇತರ ಸಿಬ್ಬಂದಿಗಳು ಬಂದು ರೋಗಿಗಳನ್ನು ಸಮಾಧಾನ ಪಡಿಸಿದ್ದಾರೆ.

ಇದೀಗ ಘಟನೆಯ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಪಿಇ ಕಿಟ್ ಧರಿಸಿ ರಾತ್ರಿಹೊತ್ತು ವಾರ್ಡ್‌ಗೆ ಪ್ರವೇಶಿಸೋಕು ಆಸ್ಪತ್ರೆ ಸಿಬ್ಬಂದಿ ಹಿಂದುಮುಂದು ನೋಡಬೇಕಾದ ಪರಿಸ್ಥಿತಿ ಬಂದಿದೆ. ಒಂದು ವೇಳೆ ರೋಗಿಗೆ ಹೃದಯ ಕಾಯಿಲೆ ಇದ್ದಿದ್ದರೆ, ಹೃದಯಾಘಾತದಿಂದ ಪ್ರಾಣಕ್ಕೇ ಅಪಾಯವಾಗುವ ತೊಂದರೆ ಇತ್ತು. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!