fbpx

Please assign a menu to the primary menu location under menu

ಕೇವಲ ಬಿಕಿನಿ ಧರಿಸಿ ಏರ್ಪೋರ್ಟ್‌ಗೆ ಬಂದ ಯುವತಿ, ಸಹಪ್ರಯಾಣಿಕರಿಗೆ ಶಾಕ್! ವೈರಲ್ ವಿಡಿಯೋ ನೋಡಿ

ನಾವು ದಿನಂಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ವಿಡಿಯೋಗಳನ್ನು ನೋಡಿರುತ್ತೇವೆ. ಇವುಗಳಲ್ಲಿ ಅನೇಕ ವಿಡಿಯೋಗಳು ಜನರನ್ನು ಆಶ್ಚರ್ಯಚಕಿತ ಮಾಡುವುದು ಸುಳ್ಳಲ್ಲ. ಇದೀಗ ಇಂತಹದ್ದೇ ಅಚ್ಚರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.

ಯುವತಿಯೊಬ್ಬಳು ಕೇವಲ ಬಿಕಿನಿ ತೊಟ್ಟು ವಿಮಾನ ಹತ್ತಲು ಏರ್ಪೋಟ್ ಪ್ರವೇಶಿಸುತ್ತಿರುವ ವಿಡಿಯೋ ಇದಾಗಿದೆ. ಒಂದು ಕೈಯಲ್ಲಿ ಹ್ಯಾಂಡ್ ಬ್ಯಾಗ್, ಬೆನ್ನಿಗೆ ಬ್ಯಾಕ್‌ಪಾಕ್ ಹಾಕಿಕೊಂಡ ಯುವತಿ ಇನ್ನೊಂದು ಕೈಯಲ್ಲಿ ವಿಮಾನದ ಟಿಕೆಟ್ ಹಿಡಿದುಕೊಂಡು ಏರ್ಪೋಟ್ ಒಳಗೆ ಓಡಾಡುತ್ತಿರೋದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ.

ಹೀಗೆ ಬಿಕಿನಿ ತೊಟ್ಟ ಯುವತಿ ಮಾಸ್ಕ್ ಧರಿಸಿದ್ದಳು ಎಂಬುದೇ ವಿಶೇಷ. ಹಲವು ವಿಮಾನ ನಿಲ್ದಾಣಗಳಲ್ಲಿ ಅಸಭ್ಯ ರೀತಿಯ ಬಟ್ಟೆ ಧರಿಸಿದವರಿಗೆ ಹಾಗೂ ಬರಿಗಾಲಲ್ಲಿ ವಿಮಾನ ನಿಲ್ದಾಣಕ್ಕೆ ಬರೋರಿಗೆ ಪ್ರವೇಶ ನಿರಾಕರಿಸಲಾಗುತ್ತೆ. ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಡ್ರೆಸ್‌ಕೋಡ್‌ಗಳು ಇರುತ್ತೆ.

ಆದರೆ ಇಲ್ಲಿ ಬಿಕಿನಿ ತೊಟ್ಟ ಯುವತಿ ಮಾತ್ರ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಏರ್ಪೋರ್ಟ್ ಒಳಗೆ ಪ್ರವೇಶಿಸಿದ್ದಾಳೆ. ಈ ವಿಡಿಯೋ ಎಲ್ಲಿಯದ್ದು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಏರ್ಪೋರ್ಟ್‌ನಲ್ಲಿ ಯುವತಿಯ ವೇಷಭೂಷಣ ನೋಡಿದ ಸಹಪ್ರಯಾಣಿಕರು ಒಮ್ಮೆ ಆಶ್ಚರ್ಯಗೊಂಡಿದ್ದಂತು ಸುಳ್ಳಲ್ಲಾ.

ಈ ವಿಡಿಯೋವನ್ನು ಅದಾಗಲೇ 30 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ, ಅನೇಕರು ಯುವತಿಯನ್ನು ಟ್ರೋಲ್ ಮಾಡಿ ಕಮೆಂಟ್‌ಗಳನ್ನು ಹಾಕಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!