fbpx

Please assign a menu to the primary menu location under menu

ಸಮುದ್ರ ತೀರದಲ್ಲಿ ಸ್ಟಂಟ್ ಮಾಡಲು ಹೋಗಿ ಕೊಚ್ಚಿಕೊಂಡು ಹೋದ ಕಾರು, ವೈರಲ್ ವಿಡಿಯೋ ನೋಡಿ

ಸಮುದ್ರ ತೀರದಲ್ಲಿ ಕಾರಿನಲ್ಲಿ ಸ್ಟಂಟ್ ಮಾಡಲು ಹೋಗಿ ಪೇಚಿಗೆ ಸಿಲುಕಿರುವ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಹ್ಯೂಂಡೈ ಐ20 ಕಾರಿನ ಮಾಲಕ ತನ್ನ ಕಾರನ್ನು ಸಮುದ್ರ ತೀರದಲ್ಲಿ ಚಲಾಯಿಸಲು ಹೋಗಿದ್ದಾನೆ.

ಈ ಸಂದರ್ಭದಲ್ಲಿ ಅಲೆಗಳ ರಭಸಕ್ಕೆ ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಅಲ್ಲೇ ಇದ್ದ ಕೆಲವರು ಈ ಘಟನೆಯ ದೃಷ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಐ 20 ಕಾರು ಕಡಲ ತೀರದಲ್ಲಿ ಸಿಲುಕಿ ಹೊರ ಬರಲು ಪರದಾಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ವೈರಲ್ ವಿಡಿಯೋದಲ್ಲಿ ಕೆಲವರು ಈ ಘಟನೆ ಗೋವಾದಲ್ಲಿ ನಡೆದಿದೆ ಎಂದು ಕಮೆಂಟ್ ಹಾಕಿದ್ದರೆ, ಇನ್ನೂ ಕೆಲವರು ಈ ಘಟನೆ ಕೇರಳದಲ್ಲಿ ನಡೆದಿದೆ ಎಂದು ಕಮೆಂಟ್ ಹಾಕಿದ್ದಾರೆ, ಈ ಘಟನೆ ನಿಜವಾಗಿಯೂ ಎಲ್ಲಿ ನಡೆದಿರೋದು ಎಂಬ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಸಮುದ್ರ ತೀರದಲ್ಲಿ ವಾಹನಗಳನ್ನು ತೆಗೆದುಕೊಂಡು ಹೋಗುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಡಲ ತಿರವು ತೀರಾ ಮೃದುವಾಗಿರುವ ಕಾರಣ ಅಲ್ಲಿರುವ ಮರಳಿನಲ್ಲಿ ಕಾರನ್ನು ಚಾಲನೆ ಮಾಡುವುದು ಕಷ್ಟ. ಒಂದು ವೇಳೆ ಕಾರು ಮರಳಿನಲ್ಲಿ ಸಿಲುಕಿಕೊಂಡರೆ, ಸರಿಯಾದ ಸಮಯಕ್ಕೆ ನೆರವು ದೊರೆಯದಿದ್ದರೆ ಸಮುದ್ರದ ಉಬ್ಬರವಿಳಿತದ ಕಾರಣಕ್ಕೆ ಕಾರು ಕೊಚ್ಚಿಕೊಂಡು ಹೋಗುವುದು ಖಚಿತ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!