fbpx

Please assign a menu to the primary menu location under menu

ಈ ವಿಚಿತ್ರ ಆಕಾರದ ಜೀವಿಯನ್ನು ಎಲ್ಲಾದರೂ ಕಂಡಿದ್ದೀರ? ವಿಡಿಯೋ ಇಲ್ಲಿದೆ ನೋಡಿ

ಚಿಟ್ಟೆಗಳು ಮತ್ತು ಪತಂಗಗಳು ಒಂದೇ ಜಾತಿಯವು. ಆದರೆ ಕೆಲವು ವ್ಯತ್ಯಾಸಗಳಿರುತ್ತವೆ. ಚಿಟ್ಟೆಗಳು ಹಗಲು ಜೀವಿಗಳಾದರೆ, ಪತಂಗಗಳು ನಿಶಾಚರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಮೇಲಕ್ಕೆ ಮಡಿಚುತ್ತವೆ. ಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡ ಅಗಲಿಸಿರುತ್ತವೆ.

ಪತಂಗಗಳಲ್ಲಿ ಲಕ್ಷಾಂತರ ಪ್ರಭೇದಗಳು ಇವೆ. ಇವುಗಳಲ್ಲಿ ಕೆಲವು ವೈರಿಗಳಿಗೆ ಆಹಾರವಾಗುವುದರಿಂದ ತಪ್ಪಿಸಿಕೊಳ್ಳಲು ವಿಶೇಷ ಆಕಾರಗಳನ್ನು ಹೊಂದಿರುತ್ತವೆ. ಹಸಿರೆಲೆ, ಒಣ ಎಲೆ, ಮರದ ಗೆಲ್ಲು, ಒಣ ಹುಲ್ಲುಗಳ ಆಕಾರವನ್ನು ಹೊಂದಿರುವ ಪತಂಗಗಳನ್ನು ನಾವು ಕಾಣಬಹುದಾಗಿದೆ.

ಇದೀಗ ಒಣಗಿರುವ ಮರದ ಗೆಲ್ಲಿನ ತುಂಡಿನಂತೆ ಹೋಲುವ ಜೀವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, ಇದನ್ನು ನೋಡಿದ ಹಲವರು ಇಂತಹಾ ಜೀವಿಗಳು ಇವೆಯೋ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಜೀವಿಗಳನ್ನು ಬರಿಗಣ್ಣಿನಿಂದ ಸುಲಭವಾಗಿ ಪತ್ತೆ ಹಚ್ಚಲು ಅಸಾಧ್ಯ, ನೊಡೋಕೆ ಥೇಟ್ ಮರದ ಗೆಲ್ಲಿನ ತುಂಡಿನಂತೆ ಹೋಲುವ ಇವು, ತುಂಬಾ ಹತ್ತಿರದಿಂದ ಗಮನಿಸಿದರೆ ಮಾತ್ರ ಇವು ಜೀವಿಗಳು ಎಂದು ಗುರುತಿಸಲು ಸಾಧ್ಯ. ವೈರಿಗಳಿಗೆ ಆಹಾರವಾಗೋದರಿಂದ ತಪ್ಪಿಸಿಕೊಳ್ಳಲು ಇವುಗಳಿಗೆ ತಮ್ಮ ಮೈ ಆಕಾರ ಸಹಕಾರಿಯಾಗುತ್ತದೆ‌. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!