fbpx

Please assign a menu to the primary menu location under menu

ಬೇರೆ ಯುವತಿಯ ಜೊತೆ ಚಕ್ಕಂದವಾಡುತ್ತಿದ್ದ ಪತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ, ಮುಂದೇನಾಯಿತು ನೋಡಿ ವೈರಲ್ ವಿಡಿಯೋ

ಬೇರೊಬ್ಬಳ ಜೊತೆ ಚಕ್ಕಂದವಾಡುತ್ತಿದ್ದ ಪತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿಯು ಹಿಗ್ಗಾಮುಗ್ಗಾ ಬಾರಿಸಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ. ಮದುವೆಯಾಗಿ ಮಕ್ಕಳಿದ್ದರೂ ಪತಿ ಬೇರೆ ಯುವತಿಯ ಜೊತೆ ಹೊಟೇಲ್ ಒಂದರಲ್ಲಿ ಲವ್ವಿಡವ್ವಿ ನಡೆಸುತ್ತಿದ್ದ.

ಈ ಬಗ್ಗೆ ಮಾಹಿತಿ ಪಡೆದ ಮಹಿಳೆಯು ತನ್ನ ಪತಿ ಹಾಗೂ ಆತನ ಗೆಳತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ಕೊಟ್ಟಿದ್ದಾಳೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಮಹಿಳೆಯು ಹೊಟೇಲ್‌ನ ಪಾರ್ಕಿಂಗ್ ಜಾಗಕ್ಕೆ ನುಗ್ಗಿ ಯುವತಿಯ ಜೊತೆ ಲವ್ವಿಡವ್ವಿಯಲ್ಲಿ ನಿರತವಾಗಿದ್ದ ಪತಿಯನ್ನು ರೆಡ್‌ ಹ್ಯಾಂಡ್ ಆಗಿ ಹಿಡಿಯೋದನ್ನ ಕಾಣಬಹುದಾಗಿದೆ. ಯುವತಿಯ ಜೊತೆ ಪತಿಯನ್ನು ರೆಡ್‌ ಹ್ಯಾಂಡ್ ಆಗಿ ಹಿಡಿದ ಮಹಿಳೆ ಬಳಿಕ ಪತಿ ಹಾಗೂ ಆತನ ಗರ್ಲ್‌ಫ್ರೆಂಡ್‌ಗೆ ಗೂಸಾ ಕೊಟ್ಟಿದ್ದಾಳೆ.

ಮೊದಲೇ ಕೋಪಗೊಂಡಿದ್ದ ಮಹಿಳೆಯು ದುಪ್ಪಟ್ಟನಿಂದ ಮುಖ ಮುಚ್ಚಿಕೊಂಡಿದ್ದ ಯುವತಿಯನ್ನು ಹಿಡಿದು ಯಾರಿವಳು ಎಂದು ಪತಿಯನ್ನು ಪ್ರಶ್ನಿಸಿದ್ದಾಳೆ. ಆದರೆ ಪತ್ನಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದ ಪತಿಯು, ತನ್ನ ಗರ್ಲ್‌ಫ್ರೆಂಡ್‌ ಅನ್ನು ಕಾಪಾಡಿಕೊಳ್ಳುವುದರಲ್ಲಿ ನಿರತನಾಗುತ್ತಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!