fbpx

Please assign a menu to the primary menu location under menu

ಗುಡ್ಡ ಹತ್ತಲಾಗದೆ ಸಂಕಷ್ಟದಲ್ಲಿದ್ದ ಮರಿ ಆನೆಗೆ ತಂದೆ ಆನೆ ಮಾಡಿದ್ದೇನು ನೋಡಿ! ವೈರಲ್ ವಿಡಿಯೋ

ತಂದೆ-ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಮಕ್ಕಳು ಸಂಕಷ್ಟದಲ್ಲಿದ್ದಾಗ ತಂದೆ-ತಾಯಿ ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ಕಾಪಾಡುತ್ತಾರೆ. ಇದಕ್ಕೆ ಸಾಕಷ್ಟು ನಿದರ್ಶನಗಳನ್ನು ನಾವು ನೋಡಿರುತ್ತೇವೆ.

ಇದೀಗ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆನೆಗಳ ಗುಂಪೊಂದು ನದಿಯಲ್ಲಿ ತಮ್ಮ ದಾಹ ತೀರಿಸಿಕೊಂಡು ನದಿ ಪಕ್ಕದ ಗುಡ್ಡವನ್ನು ಹತ್ತುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ದೊಡ್ಡ ಗಾತ್ರದ ಆನೆಗಳು ಬೇಗನೆ ಗುಡ್ಡವನ್ನು ಹತ್ತಿ ಮೇಲಕ್ಕೇರಿದರೆ ಆನೆಗಳ ಗುಂಪಿನಲ್ಲಿದ್ದ ಮರಿ ಆನೆಯೊಂದು ಗುಡ್ಡ ಹತ್ತಲಾಗದೆ ಸಂಕಷ್ಟದಲ್ಲಿತ್ತು. ಗುಡ್ಡ ಹತ್ತಲು ಕಷ್ಟಪಡುತ್ತಿದ್ದ ಮರಿ ಆನೆಗೆ ತಂದೆ ಬೆಂಬಲವಾಗಿ ನಿಂತು ತನ್ನ ಸೊಂಡಿಲಿನಿಂದ ಮೇಲಕ್ಕೆ ದೂಡಿ ಗುಡ್ಡ ಹತ್ತಿಸಿದೆ.

ಮೇಲಕ್ಕೇರಿದ ಮರಿ ಆನೆ ಓಡುತ್ತಾ ಮೇಲೆ ತನಗಾಗಿ ಕಾಯುತ್ತಾ ನಿಂತಿದ್ದ ತಾಯಿಯ ಬಳಿ ಸೇರಿದೆ. ಐಎಫ್ಎಸ್ ಅಧಿಕಾರಿ ಸುಸಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!