fbpx

Please assign a menu to the primary menu location under menu

ಕೋವಿಡ್ ನಿಯಮ ಉಲ್ಲಂಘಿಸಿದ ಏಕೈಕ ಕಾರಣಕ್ಕೆ ಸೈನಿಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪೊಲೀಸರು, ವೈರಲ್ ವಿಡಿಯೋ ನೋಡಿ

ಕಾನೂನು ಉಲ್ಲಂಘನೆ ಮಾಡಿದ್ರೆ ಶಿಕ್ಷೆಗೆ ಒಳಪಡಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇದೆಯೇನೋ‌ ಸರಿ, ಆದರೆ ಈ ನೆಪದಲ್ಲಿ ಪೊಲೀಸರೇ ನಿಯಮ ಮೀರಿ ವರ್ತಿಸಿದರೆ ಏನಾಗಬೇಡ ಹೇಳಿ. ಇಂತಹದ್ದೇ ಘಟನೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ದೇಶ ಕಾಯೋ ಸೈನಿಕನ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ‌ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮಾಸ್ಕ್ ಧರಿಸದೆ ಇದ್ದ ಸೈನಿಕನಿಗೆ ಮೂವರು ಪೊಲೀಸರು ಮನಬಂದಂತೆ ಥಳಿಸಿದ್ದಾರೆ.

ಘಟನೆ ನಡೆದಿರೋದು ಜಾರ್ಖಂಡ್‌ನ ಚತ್ರ ಎಂಬಲ್ಲಿ. ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕನಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಷಕ್ಕೆ‌ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ ಜಾರ್ಖಂಡ್ ಪೊಲೀಸರು ಸೈನಿಕ ಪವನ್ ಕುಮಾರ್ ಯಾದವ್ ಅವರಿಗೆ ಬೂಟುಗಾಲಲ್ಲಿ ತುಳಿಯುವುದು, ಲಾಠಿಯಲ್ಲಿ ಹಿಗ್ಗಾಮುಗ್ಗಾ ಹೊಡೆಯುವುದು, ಮನ ಬಂದಂತೆ ಥಳಿಸಿರುವುದು ನೋಡಬಹುದಾಗಿದೆ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದ್ದರೆ ಸೈನಿಕನನ್ನು ನ್ಯಾಯಲಯದ ಮುಂದೆ ಹಾಜರುಪಡಿಸಬಹುದಿತ್ತು, ಅದು ಬಿಟ್ಟು ಪೊಲೀಸರೇ ಗೂಂಡಾಗಳ ರೀತಿ ವರ್ತಿಸಿರೋದು ಆಕ್ರೋಶಕ್ಕೆ ಕಾರಣವಾಗಿರೋದು.

ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸೈನಿಕನನ್ನು ಥಳಿಸಿದ್ದ ಮೂವರು ಪೊಲೀಸರನ್ನು ಜಾರ್ಖಂಡ್ ಪೊಲೀಸ್ ಇಲಾಖೆ ಅಮಾನತುಗೊಳಿಸಿದೆ. ಪೊಲೀಸರ ಪ್ರಕಾರ ಥಳಿತಕ್ಕೊಳಗಾದ ಸೈನಿಕ ಮಾಸ್ಕ್ ಕೂಡ ಧರಿಸಿರಲಿಲ್ಲ ಅಲ್ಲದೆ ಬೈಕ್ನಲ್ಲಿ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದರು, ಈ‌ ಸಂಬಂಧ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಸೈನಿಕ ಪೊಲೀಸರ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದಾಗಿ ಎಸ್ಪಿ ಘಟನೆ ಕುರಿತು ವರದಿ ನೀಡಿದ್ದಾರೆ.

Watch Video

error: Content is protected !!