fbpx

Please assign a menu to the primary menu location under menu

ಬೀದಿ ರಂಪಾಟ ಮಾಡಿ ದರ್ಪ ತೋರಿದ ಯುವತಿಗೆ ಕೆನ್ನೆಗೆ ಬಾರಿಸಿ ಬುದ್ದಿ ಕಲಿಸಿದ ಯುವಕ, ವೈರಲ್ ವಿಡಿಯೋ ನೋಡಿ

ನಡುರಸ್ತೆಯಲ್ಲಿ ಯುವಕ-ಯುವತಿ ಕಿತ್ತಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಕೀಟಲೆ ಮಾಡಲು ಹೋಗಿ ಯುವತಿ ಕೆನ್ನೆಗೆ ಏಟು ಹೊಡಿಸಿಕೊಂಡಿದ್ದಾಳೆ.

ಘಟನೆ ನಡೆದಿರೋದು ದೆಹಲಿಯಲ್ಲಿ, ತಮಾಷೆ ವಿಡಿಯೋ ಚಿತ್ರೀಕರಿಸುವ ಸಲುವಾಗಿ ಯುವತಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ಯುವಕನ ಮೇಲೆ ತಂಪು ಪಾನೀಯವನ್ನು ಚೆಲ್ಲಿದ್ದಳು. ಅಷ್ಟೇ ಅಲ್ಲದೆ ಯುವಕನನ್ನೇ ತರಾಟೆಗೆ ತೆಗೆದುಕೊಂಡಿದ್ದಾಳೆ. ಯುವಕ ವಿರೋಧಿಸುತ್ತಿದ್ದಂತೆ ಇಬ್ಬರ ನಡುವೆ ಜಗಳ ಏರ್ಪಟ್ಟಿದೆ.

ಜಗಳ ತಾರಕಕ್ಕೇರುತ್ತಿದ್ದಂತೆಯೇ ಯುವತಿಯು ಯುವಕನ ಕೆನ್ನೆಗೆ ಬಾರಿಸಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಯುವತಿಯು ಮತ್ತೊಂದು ಬಾರಿ ಯುವಕನ ಕೆನ್ನೆಗೆ ಏಟು ನೀಡಿದ್ದಾಳೆ. ಇದರಿಂದ ಕ್ರೋಧಗೊಂಡ ಯುವಕ ಕೂಡ ಯುವತಿಯ ಕೆನ್ನೆಗೆ ಬಾರಿಸಿದ್ದಾನೆ. ಕೂಡಲೇ ಅಲ್ಲಿ ಜನರು ಜಮಾಯಿಸಿದ್ದಾರೆ. ಅನೇಕರು ಇವರಿಬ್ಬರ ನಡುವೆ ನಡೆಯುತ್ತಿದ್ದ ಜಗಳವನ್ನು ನಿಲ್ಲಿಸಲು ಯತ್ನಿಸಿದ್ದಾರೆ.

ನೀನು ಹುಡುಗಿ ಎಂಬ ಒಂದೇ ಕಾರಣಕ್ಕೆ ನೀನು ಏನು ಬೇಕಿದ್ದರೂ ಮಾಡಬಹುದೇ..? ಹುಡುಗರಿಗೆ ಗೌರವ ಅನ್ನೋದು ಇರೋದಿಲ್ವೇ ಎಂದು ಯುವಕ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಪ್ರತ್ಯುತ್ತರ ನೀಡಿದ ಯುವತಿ ನೀನು ಹುಡುಗಿಯ ಕೆನ್ನೆಗೆ ಬಾರಿಸುತ್ತೀಯಾ..? ಎಂದು ಕೇಳಿದ್ದಾಳೆ. ಇದಕ್ಕೆ ಯುವಕ ನೀನು ನನಗೆ ಮೂರು ಬಾರಿ ಹೊಡೆದಿದ್ದೀಯಾ.

ನಾನೊಬ್ಬ ಶಿಕ್ಷಕ ಎಂದು ಹೇಳಿದ್ದಾನೆ. ಕೊನೆಯಲ್ಲಿ ಯುವಕ ಲಕ್ನೋದಲ್ಲಿ ನಡೆದ ಘಟನೆ ಬಗ್ಗೆ ಈಕೆಗೆ ಯಾರಾದರೂ ವಿವರಿಸಿ ಎಂದು ಹೇಳಿದ್ದಾನೆ. ಇದಾದ ಬಳಿಕ ಯುವತಿ ಕ್ಷಮೆ ಯಾಚಿಸಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!