fbpx

Please assign a menu to the primary menu location under menu

ತಾಲಿಬಾನ್ ಉ’ಗ್ರರ ಅಟ್ಟಹಾಸ, ವ್ಯಕ್ತಿಯನ್ನು ಹೆಲಿಕಾಪ್ಟರ್‌ಗೆ ಕಟ್ಟಿ ಹಾರಾಟ ನಡೆಸಿದ ಉ’ಗ್ರರು! ವೈರಲ್ ವಿಡಿಯೋ ನೋಡಿ

ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಇಸ್ಲಾಮಿಕ್ ಭ-ಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ. 20 ವರ್ಷಗಳ ನಂತರ ಅಮೇರಿಕಾ ಹಾಗೂ ನ್ಯಾಟೋ ಪಡೆಗಳು ಅಪ್ಘಾನಿಸ್ತಾನ ತೊರೆಯುತ್ತಿದ್ದಂತೆ ತಾಲಿಬಾನಿಗಳು ಅಪ್ಘಾನಿಸ್ತಾನದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಇಸ್ಲಾಮಿಕ್ ಕಾನೂನಿನ ನೆಪದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಮಾಯಕರನ್ನ ಕೊಲ್ಲುತ್ತಿರೋದು ಒಂದು ಕಡೆಯಾದರೆ, ಅಮೇರಿಕಾ ಸೇನೆ ಬಿಟ್ಟು ಹೋದ ಶಸ್ತ್ರಾಸ್ತ್ರಗಳ ಮೇಲೆ ಹಿಡಿತ ಸಾಧಿಸಿರೋದು ವಿಶ್ವದಾದ್ಯಂತ ಹಲವು ರಾಷ್ಟ್ರಗಳ ಕಳವಳಕ್ಕೆ ಕಾರಣವಾಗಿದೆ.

ಅಮೇರಿಕಾ ಸೇನೆ ತಾಲಿಬಾನಿ ಭ-ಯೋತ್ಪಾದಕರ ವಿರುದ್ಧ ಕಾರ್ಯಾಚರಣೆಗಾಗಿ ತಂದಿದ್ದ ಸುಮಾರು 2ಲಕ್ಷಕ್ಕೂ ಹೆಚ್ಚು ಶಾಸ್ತ್ರಾಸ್ತ್ರಗಳು, 20ಸಾವಿರಕ್ಕೂ ಹೆಚ್ಚು ಮಿಲಿಟರಿ ಹಮ್ವೀ ಜೀಪ್‌ಗಳು ಹಾಗೂ ನೂರಾರು ಸೇನಾ ಹೆಲಿಕಾಪ್ಟರ್‌ಗಳನ್ನು ಬಿಟ್ಟು ಪಲಾಯನಗೈದಿದ್ದಾರೆ. ಈಗ ಈ ಶಸ್ತ್ರಾಸ್ತ್ರಗಳು ತಾಲಿಬಾನ್ ಉಗ್ರರ ಕೈ ಸೇರಿವೆ.

ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಅಮೇರಿಕಾ‌ ಸೇನೆ ಬಿಟ್ಟು ಹೋದ 40ಕೋಟಿ ಬೆಲೆಯ UH-60 ಬ್ಲಾಕ್ ಹಾಕ್ ಹೆಲಿಕಾಪ್ಟರ್ ಉಡಾಯಿಸಿರುವ ತಾಲಿಬಾನ್ ಉಗ್ರರು, ಹೆಲಿಕಾಪ್ಟರ್ ಗೆ ವ್ಯಕ್ತಿಯೊಬ್ಬನನ್ನು ಕಟ್ಟಿ ಹಾರಿಸುತ್ತಿರುವ ವಿಡಿಯೋ ಇದಾಗಿದೆ. ವ್ಯಕ್ತಿಯನ್ನು ಕೊಂದು ನೇತಾಡಿಸಲಾಗಿದೆಯೋ ಅಥವಾ ನೇತಾಡುತ್ತಿರುವ ವ್ಯಕ್ತಿ ಉಗ್ರ ಸಂಘಟನೆಗೆ ಸೇರಿದವನೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ವಿಡಿಯೋವನ್ನು ತಾಲಿಬಾನ್ ಅಧಿಕೃತ ಟ್ವಿಟರ್ ಅಕೌಂಟ್‌ನಲ್ಲಿ, ‘ನಮ್ಮ ವಾಯುಸೇನೆ ಕಂದಹಾರ್ ನಗರದ ಮೇಲೆ ಗಸ್ತು ಮಾಡುತ್ತಿದೆ’ ಎಂಬ ಅಡಿಬರಹದೊಂದಿಗೆ ಶೇರ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Watch Video

error: Content is protected !!